ಪಾವಗಡ: ಪಟ್ಟಣದಲ್ಲಿ ಬಂಜಾರ ಸಮಾಜದ ಧರ್ಮ ಗುರು ಶ್ರೀ ಸಂತ ಸೇವಾಲಾಲ್ ಮಹಾರಾಜ್ ರ 285ನೇ ಜಯಂತೋತ್ಸವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ.
ಪಟ್ಟಣದ ಎಪಿಎಂಸಿ ಆವರಣದಿಂದ ಪ್ರಾರಂಭಗೊಡ ಉತ್ಸವದಲ್ಲಿ ಶನಿಮಹಾತ್ಮ ಸರ್ಕಲ್ ವರೆಗೂ ಮುಂದುವರೆಯಿತು.
ಮೆರವಣಿಗೆಯಲ್ಲಿ ಸರಿಗಮಪ ಖ್ಯಾತಿಯ ಹನುಮಂತು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸಂತ ಸೇವಾಲಾಲ್ ಮಹಾರಾಜರ ಪೀಠದ ಸೇವಾಲಾಲ್ ಸ್ವಾಮೀಜಿಯವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪಾವಗಡ ತಾಲೂಕಿನ ಬಂಜಾರ ಸಮುದಾಯದ ಕುಲಬಾಂಧವರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಬಳಿಕ SSK ಬಯಲು ರಂಗ ಮಂದಿರದಲ್ಲಿ ಸರಿಗಮಪ ಖ್ಯಾತಿಯ ಹನುಮಂತು ಅವರು ಲಂಬಾಣಿ ಹಾಡುಗಳನ್ನು ಹಾಡಿದರು.
ಇದೇ ವೇಳೆ ಬಂಜಾರ ಜಾಗೃತ ದಳ ರಾಜ್ಯಾಧ್ಯಕ್ಷ ತಿಪ್ಪ ಸರ್ ನಾಯ್ಕ ಅವರು ಮಾಧ್ಯಮ ರೊಂದಿಗೆ ಮಾತನಾಡಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


