ಸರಗೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಸವಾಲಾಗಿದ್ದು, ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕು’ ಎಂದು ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು.
ಸರಗೂರು ತಾಲ್ಲೂಕಿನ ಬಿ ಮಟಕೆರೆ ಗ್ರಾಪಂ ವ್ಯಾಪ್ತಿಯ ಬಿ ಮಟಕೆರೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವಿ ಎಸ್ ಎಸ್ ಸಮುದಾಯ ಭವನದಲ್ಲಿ ದಸಂಸ (ಅಂಬೇಡ್ಕರ್ ವಾದ) ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಮಕ್ಕಳು ಸಾಧನೆ ಮಾಡಬೇಕಾದರೆ ಅವರ ಗುರಿ ಸ್ಪಷ್ಟವಾಗಿರಬೇಕು, ಆ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು, ಪರೀಕ್ಷೆಗಳು ಅಂದರೆ ಅದು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು, ಭಯ ಮುಕ್ತರಾಗಿ ಪರೀಕ್ಷೆ ಎದುರಿಸಿ, ಆತ್ಮವಿಶ್ವಾಸದಿಂದ ಬರೆಯಿರಿ ಎಂದು ಸಲಹೆ ನೀಡಿದರು.
ಪರೀಕ್ಷೆಗಳನ್ನು ಎದುರಿಸುವ ಕುರಿತು ಮಕ್ಕಳಿಗೆ ಒಂದು ದಿನದ ಕಾರ್ಯಾಗಾರವನ್ನು ಎಸ್.ಎಸ್.ಎಲ್.ಸಿ ವಿಜಯೀಭವ ಎನ್ನುವ ಹೆಸರಿನಲ್ಲಿ ಒಂದು ದಿನದ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿ, ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವುದರ ಜೊತೆಗೆ, ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ಒಂದು ನಿಮಿಷವನ್ನು ವ್ಯರ್ಥ ಮಾಡದೆ ವ್ಯಾಸಂಗದತ್ತ ಗಮನ ಹರಿಸಬೇಕು. ಮೊಬೈಲ್, ಟಿವಿಯಿಂದ ದೂರವಿರಬೇಕು ಎಂದರು.
ಬಿ ಮಟಕೆರೆ ಗ್ರಾಪಂ ಪಿಡಿಒ ಭಾಗ್ಯಮ್ಮ, ನೊಡಲ್ ಅಧಿಕಾರಿ ಕೃಷ್ಣಮೂರ್ತಿ, ಮಾತನಾಡಿದರು. ಇದೇ ವೇಳೆ ದಸಂಸ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಉಪಯೋಗಿ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಿದರು.
ಸಂಪನ್ಮೂಲ ಅಧಿಕಾರಿ ಪ್ರಕಾಶ್ ಮತ್ತು ಹರ್ಷವರ್ಧನ್ ಅವರು ಅಂಬೇಡ್ಕರ್ ಆಶ್ರಮ ಶಾಲೆ, ಬಿ ಮಟಕೆರೆ, ಎಂ ಸಿ ತಳಲು ಶಾಲೆಯ ಮಕ್ಕಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಸಂಚಾಲಕ ದೊಡ್ಡಸಿದ್ದು, ನಂಜನಗೂಡು ಬಸವರಾಜು, ತಾಲ್ಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಚಂದ್ರ, ಸಂಘಟನೆ ಸಂಚಾಲಕರು ಅಣ್ಣಯ್ಯ ಸ್ವಾಮಿ ಕಂದೇಗಾಲ, ನಾಗೇಂದ್ರ ಮೊಳೆಯೂರು ಕಾವಲ್, ಶಿವಕುಮಾರ್, ಮಣಿಕಂಠ, ಕೃಷ್ಣ,ಬಿ ಮಟಕೆರೆ ಪ್ರೌಢಶಾಲೆ ಶಾಲೆ ಮುಖ್ಯ ಶಿಕ್ಷಕ ಮಾರುತಿ ಗೌಡ, ಆಶ್ರಾಮ ಶಾಲೆ ವಾರ್ಡನ್ ನಂಜಯ್ಯ, ಶಿಕ್ಷಕರು ಅನಿತಾ, ವಿನುತಾ, ಇನ್ನೂ ಮುಖಂಡರು ಸೇರಿದಂತೆ ದಸಂಸ ಮುಖಂಡರು ಭಾಗವಹಿಸಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


