ಕೊರಟಗೆರೆ: ಬಿಜೆಪಿ ಒಂದು ಕೋಮುವಾದಿ ಪಕ್ಷ ಜೆಡಿಎಸ್ ಒಂದು ನೆಲೆ ಇಲ್ಲದ ಪಕ್ಷ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದರು.
ಕೊರಟಗೆರೆ ರಾಜೀವ್ ಭವನದ ಮುಂಭಾಗದಲ್ಲಿ ನಡೆದ ಬೃಹತ್ ಲೋಕಸಭಾ ಚುನಾವಣೆ ಪ್ರಚಾರ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಅನೇಕ ಮುಖಂಡರು ಜೆಡಿಎಸ್ ಪಕ್ಷವನ್ನು ತೊರೆದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಜೆಡಿಎಸ್ ಪಕ್ಷದವರನ್ನ ನಮ್ಮ ಜೊತೆ ಸೇರಿಸಿಕೊಂಡು ನಾವು ಒಂದು ಬಾರಿ ಆ ತಪ್ಪನ್ನು ಮಾಡಿದ್ದೆವು ಎಂದರು.
ಬಿಜೆಪಿಯವರಿಗೆ 25 ವರ್ಷಗಳಿಂದ ಮಾತ್ರ ಶ್ರೀರಾಮ ಸಿಕ್ಕಿದ್ದಾನೆ. ನಾವು ಚಿಕ್ಕ ವಯಸ್ಸಿನಿಂದಲೂ ಶ್ರೀರಾಮನ ನೋಡುತ್ತಾ ಬಂದಿದ್ದೇವೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಬೇಡ ಅದು ನಮ್ಮ ಸಂವಿಧಾನದಲ್ಲಿ ಇಲ್ಲ ಎಂದರು.
ನುಡಿದಂತೆ ನಡೆದಿರುವ ಪಕ್ಷ ಕಾಂಗ್ರೆಸ್, ಎಲ್ಲ ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದೇವೆ ಅನುಮೋದನೆಗೆ ತಂದಿದ್ದೇವೆ. 136 ಸೀಟುಗಳನ್ನು ಗೆಲ್ಲುವುದು ಸುಲಭವಲ್ಲ. ಲೋಕಸಭೆ ಚುನಾವಣೆ ಮುಗಿದ ನಂತರ ಗ್ಯಾರೆಂಟಿಯನ್ನು ನಿಲ್ಲಿಸುತ್ತಾರೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ನಾವೀಗಾಗಲೇ ಬಜೆಟ್ ನಲ್ಲಿ ಗ್ಯಾರಂಟಿಗಾಗಿ ಹಣವನ್ನು ಇಟ್ಟಿದ್ದೇವೆ ಎಂದು ಅವರು ಹೇಳಿದರು.
ಪ್ರತಿ ಮನೆಯ ಸದಸ್ಯನಿಗೆ 16 ಲಕ್ಷ ಹಣ ಕೊಡುತ್ತೇನೆ ಎಂದು ಮೋದಿ ಹೇಳಿದ್ದರು. ಸುಳ್ಳು ಹೇಳುವುದೇ ಬಿಜೆಪಿಯವರ ಕೆಲಸ ಎಂದು ಅವರು ಹೇಳಿದರು.
ಕಾಂಗ್ರೆಸ್ಸನ್ನು ತೊರೆದು ಜೆಡಿಎಸ್ ಗೆ ಹೋಗಿದ್ದ ಮುದ್ದ ಹನುಮೇಗೌಡರು ಮರಳಿ ಮತ್ತೆ ನಮ್ಮ ಪಕ್ಷಕ್ಕೆ ಮುದ್ದಹನುಮೇಗೌಡರು ಬಂದಿದ್ದಾರೆ. ಅವರಿಗೆ ಸ್ವಾಗತಿಸಿ ಈ ಬಾರಿಯ ಲೋಕಸಭಾ ಚುನಾವಣೆಗೆ ನಮ್ಮ ಹೈಕಮಾಂಡ್ ಟಿಕೆಟ್ ನೀಡಿದ್ದಾರೆ ಎಂದು ಇದೇ ವೇಳೆ ಪರಮೇಶ್ವರ್ ಹೇಳಿದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ