ಮಹಾರಾಷ್ಟ್ರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟಿವಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ದೇಶದ ಜ್ವಲಂತ ಸಮಸ್ಯೆಗಳನ್ನು ಜನರಿಗೆ ತೋರಿಸುವ ಬದಲು ಮೋದಿಯವರನ್ನೇ ತೋರಿಸುತ್ತಾರೆ ಎಂದು ಟೀಕಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ರೈತರ ಸಮಸ್ಯೆಗಳು, ಹಣದುಬ್ಬರ, ನಿರುದ್ಯೋಗ, ಅಗ್ನಿವೀರರ ಸಮಸ್ಯೆಗಳು ಇಂದು ದೇಶದಲ್ಲಿ ಪ್ರಮುಖವಾಗಿವೆ.
ಆದರೆ, ಟಿವಿ ಚಾನೆಲ್‌ಗಳಲ್ಲಿ ಈ ವಿಷಯಗಳ ಬಗ್ಗೆ ನೀವು ಎಂದಿಗೂ ಚರ್ಚೆಯನ್ನು ನೋಡುವುದಿಲ್ಲ. ಬದಲಿಗೆ ಟಿವಿ ಚಾನೆಲ್‌ಗಳು ಮೋದಿಜಿಯನ್ನು 24 ಗಂಟೆಗಳ ಕಾಲ ತೋರಿಸುತ್ತವೆ ಎಂದು ಕಿಡಿ ಕಾರಿದರು.
ಮಾಧ್ಯಮಗಳ ಕ್ಯಾಮರಾಗಳು ದಿನದ 24 ಗಂಟೆಗಳ ಕಾಲ ಮೋದಿಯವರ ಬೆನ್ನ ಹಿಂದೆಯೇ ಇರುತ್ತವೆ. ಮೋದಿ ಸಮುದ್ರದಾಳಕ್ಕೆ ತೆರಳಿ ಪೂಜೆ ಮಾಡುತ್ತಾರೆ. ಕ್ಯಾಮರಾಗಳೂ ಅವರ ಜೊತೆಗೆ ಸಮುದ್ರಕ್ಕೆ ಇಳಿಯುತ್ತವೆ. ದೇಶದಲ್ಲಿನ ಸಮಸ್ಯೆಗಳತ್ತ ಗಮನ ಕೇಂದ್ರಿಕರಿಸಬೇಕಿದ್ದ ಮಾಧ್ಯಮಗಳು ತಮ್ಮ ಕರ್ತವ್ಯ ಮರೆತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


