ಬೆಂಗಳೂರು: ಅಪರಿಚಿತ ಮಹಿಳೆಯ ಕಾಲುಗಳು ಪತ್ತೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಬಗ್ಗೆ ವರದಿಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಕಾಡಂಚಿನ ಗ್ರಾಮ ಮುನಿಮಾರಾಯ್ಯನದೊಡ್ಡಿ ಸಮೀಪ ಮಹಿಳೆಯನ್ನು ಕೊಲೆ ಮಾಡಿ ನಂತರ ಅನುಮಾನ ಬಾರದಿರಲಿ ಎಂದು ಹಂತಕರು ದೇಹವನ್ನು ಕತ್ತರಿಸಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕೊಳೆತ ಸ್ಥಿತಿಯಲ್ಲಿ ಕಾಲುಗಳು ಪತ್ತೆಯಾಗಿದ್ದು, ಇದೇ ಜಾಗದ ಸಮೀಪ ಕಳೆದ ಹದಿನೈದು ದಿನಗಳ ಹಿಂದೆ ಮಹಿಳೆಯ ಕೈ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಕೈ ಸಿಕ್ಕ ಜಾಗದ ಸಮೀಪವೇ ಮಹಿಳೆಯ ಎರಡು ಕಾಲುಗಳು ಸಿಕ್ಕಿದ್ದು, ಆಘಾತಕಾರಿ ವಿಷಯವಾಗಿದೆ. ಮುಂಜಾನೆ ಗ್ರಾಮಸ್ಥರು ಗಮನಿಸಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಂತಕರು ಮಹಿಳೆಯನ್ನು ಕೊಂದು ಅಂಗಾಂಗಳನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು,ಸದ್ಯ ಪೊಲೀಸರು ಮಹಿಳೆಯ ಉಳಿದ ಅಂಗಾಂಗಗಳ ಹುಡುಕಾಟವನ್ನು ನಡೆಸಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನು ಹಂತಕರ ಬೆನ್ನತ್ತಿರುವ ಬನ್ನೇರುಘಟ್ಟ ಪೊಲೀಸರು ಕೈ ಮತ್ತು ಕಾಲುಗಳ ಜಾಡು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


