ಹುಬ್ಬಳ್ಳಿ: ಪ್ರೀತಿಸಿದ ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಸಿಟ್ಟಾದ ಯುವಕನೊಬ್ಬ ಹುಬ್ಬಳ್ಳಿಯ ವರೂರಿನ ಜಗದೀಶ್ ಡಾಬಾದಲ್ಲಿ ಯುವಕನ ಮೇಲೆ ಕೊಡಲಿಯಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಸುಧೀರ್ ಹುಲಗೂರು(31) ಹತ್ಯೆಯಾದವನು. ಸಾಗರ್ ಗಾಬಣ್ಣವರ್ ಕೊಲೆ ಆರೋಪಿಯಾಗಿದ್ದಾನೆ.
ಸಾಗರ್ ಪ್ರೀತಿಸುತ್ತಿದ್ದ ಹುಡುಗಿಯನ್ನು ಸುಧೀರ್ ಚುಡಾಯಿಸಿದ್ದ. ಇದೇ ವಿಚಾರಕ್ಕೆ ಸಾಗರ್ ಹಾಗೂ ಸುಧೀರ್ ನಡುವೆ ಡಾಬಾದಲ್ಲಿ ಗಲಾಟೆ ಶುರುವಾಗಿದ್ದು, ಮಾತಿಗೆ ಮಾತು ಬೆಳೆದಾಗ ಸಿಬ್ಬಂದಿ ಸಮಾಧಾನ ಮಾಡಿ ಹೊರಕಳಿಸಿದ್ದರು. ಡಾಬಾದಲ್ಲಿ ಊಟ ಮಾಡಿ ಹೊರಬರುತ್ತಿದ್ದ ಸುಧೀರ್ ಮೇಲೆ ಸಾಗರ್ ಒಮ್ಮೆಲೆ ದಾಳಿ ಮಾಡಿ, ಕೊಡಲಿ ಬೀಸಿ ಸುಧೀರ್‌ನನ್ನು ಕೊಲೆ ಮಾಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಆರೋಪಿ ಸಾಗರ್ ನನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


