ತುಮಕೂರು: ತುಮಕೂರು ತಾಲೂಕು ಬೆಳದರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆಟದ ಮೈದಾನಕ್ಕೆ ತಹಶೀಲ್ದಾರ್, ಬಿಇಒ, ಎಸ್ ಡಿ ಎಂ ಸಿ ಸದಸ್ಯರು ಮತ್ತು ಕೋರ ಪೊಲೀಸ್ ಠಾಣಾಧಿಕಾರಿಗಳು ಫೆನ್ಸಿಂಗ್ ನಿರ್ಮಿಸಿ ಸುತ್ತ ಗಿಡಗಳನ್ನು ನೆಟ್ಟಿರುವುದನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೋರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಈ ಹಿಂದೆ ದಾಖಲಿಸಿದ್ದರು.
ಈ ಬಗ್ಗೆ ಲೋಕಾಯುಕ್ತದಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ರವರು ದೂರನ್ನು ದಾಖಲಿಸಿದ್ದರು. ಸದರಿ ದೂರಿನ ಅನ್ವಯ ಉಪಲೋಕಾಯುಕ್ತ ನ್ಯಾಯಮೂರ್ತಿ ಪಣಿಂದ್ರರವರು ತುಮಕೂರುಪೊಲೀಸ್ ವರಿಷ್ಠಾಧಿಕಾರಿ( SP) ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳು ದೂರುದರಾದ ಹೆಚ್.ಎಂ ವೆಂಕಟೇಶ್ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶದ ವರದಿಯನ್ನು ನೀಡುವಂತೆ ಕೇಳಿದ್ದರು.
ಶನಿವಾರ ಬೆಳಧರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆಟದ ಮೈದಾನಕ್ಕೆ ಆಗಮಿಸಿದ ತುಮಕೂರು ಎಸ್ಪಿ(SP) ಸಮ್ಮುಖದಲ್ಲಿ ಕಲ್ಯಾಣ ಮಂಟಪದ ಮಾಲೀಕರಾದ ಚಂದ್ರಪ್ಪನವರು ಆಟದ ಮೈದಾನದಲ್ಲಿ ಹಾಕಿರುವ ಫೆನ್ಸಿಂಗನ್ನು ತೆರವುಗೊಳಿಸಿರುವುದು ನಾನೇ ಎಂದು ತಿಳಿಸಿದರು, ಆಗ ಸ್ಥಳದಲ್ಲಿಯೇ ಅವರನ್ನು ಸರ್ಕಾರದ ಆಸ್ತಿ ನಾಶಪಡಿಸಿ ದರ ಬಗ್ಗೆ ಬಂಧಿಸ ಬೇಕಾಗಿದ್ದ ಎಸ್ ಪಿ ಅವರು ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದಿರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸರ್ಕಾರಿ ಶಾಲೆಯ (ಕಾಂಪೌಂಡ್) ತಂತಿ ಬೇಲಿಯನ್ನು ನಿರ್ಮಿಸಿ ಗಿಡಗಳನ್ನು ನೆಟ್ಟಿರುವುದನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದರು. ಸಹಿತ ಹಿರಿಯ ಪೊಲೀಸ ಅಧಿಕಾರಿ ಸಮ್ಮುಖದಲ್ಲಿ ನಾನೇ ಮಾಡಿದ್ದು ಎಂದು ಚಂದ್ರಪ್ಪ ಹೇಳಿದರೂ ಸಹಿತ ಅವರ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಿ ಬಂಧಿಸದೇ ಇರುವುದು ಖಂಡನೀಯ ಎಂದು ತುಮಕೂರು ಕಾಳಜಿ ಫೌಂಡೇಶನ್, ಭೀಮ್ ಆರ್ಮಿ ಸಂಘಟನೆ ಇನ್ನಿತರ ಸಂಘಟನೆಗಳು ಖಂಡಿಸಿವೆ.
ಕೋರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಶಾಲಾ ಬೇಲಿಯನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಿದ ವ್ಯಕ್ತಿಯೇ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳ ಸಮ್ಮುಖದಲ್ಲಿ ಹೇಳಿದ್ದರು ಸಹಿತ ಅವರನ್ನು ಬಂಧಿಸದೆ ಅವರನ್ನು ಬೆಂಬಲಿಸಿರುವುದು ಆ ಸಂದರ್ಭದಲ್ಲಿ ತೆಗೆದ ವಿಡಿಯೋದಲ್ಲಿ ಕಂಡು ಬರುತ್ತದೆ.
ಪ್ರಭಾವಿ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಜೆಸಿಬಿ ವಶಕ್ಕೆ ಪಡೆಯುವ ಶಕ್ತಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇಲ್ಲವೇ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಅಥವಾ ಸಚಿವರ ಹೆಸರುಗಳನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಯ ಮೇಲೆ ಯಾವುದೇ ಕ್ರಮ ಜರುಗಿಸದೆ ಸ್ಥಳದಿಂದ ನಿರ್ಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಬಗ್ಗೆ ನೈಜ್ಯ ಹೋರಾಟಗಾರರ ವೇದಿಕೆ ಬೇಸರ ವ್ಯಕ್ತಪಡಿಸಿದೆ.
ವಿಡಿಯೋ ನೋಡಿ:
ಬೆಳೆದರೆ ಶಾಲೆಯ ಆಟದ ಮೈದಾನದ ಸುತ್ತ ಹಾಕಿರುವ ಫೆನ್ಸಿಂಗ್ ತೆರವುಗೊಳಿಸಲು ಸಚಿವ ರಾಜಣ್ಣನೇ ನನಗೆ ಹೇಳಿರುವುದು: ಕಲ್ಯಾಣ ಮಂಟಪದ ಮಾಲಿಕ ಚಂದ್ರಪ್ಪ@siddaramaiah @RAshokaBJP @BJP4Karnataka pic.twitter.com/KOtVzWQwcQ
— Namma Tumakuru (@namma_tumakuru) March 17, 2024
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


