ಕ್ಷುಲ್ಲಕ ಕಾರಣಕ್ಕೆ ಯುವತಿಯನ್ನು ಪ್ರಿಯಕರನೇ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಏಳು ತಿಂಗಳ ಹಿಂದೆ ದಿನಸಿ ಅಂಗಡಿಯಲ್ಲಿ ಅಂಜಲಿ ಮತ್ತು ಲಲ್ಲನ್ ಯಾದವ್ ಎಂಬವರಿಗೆ ಪರಿಚಯವಾಗಿತ್ತು. ಬಳಿಕ ಒಟ್ಟಿಗೆ ಜೀವನ ಸಾಗಿಸುವ ನಿರ್ಧಾರ ಮಾಡಿ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು.
ಲಲ್ಲನ್ ಯಾದವ್ ಅಂಜಲಿಯನ್ನು ತನ್ನ ಹೆಂಡತಿ ಎಂದು ಪರಿಚಯ ಮಾಡಿಕೊಂಡು ಬಾಡಿಗೆ ಮನೆ ಪಡೆದುಕೊಂಡಿದ್ದ, ಆದರೆ ಅಡುಗೆ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.
ಲಲ್ಲನ್ ಯಾದವ್ ತನಗಾಗಿ ಮೊಟ್ಟೆ ಕರಿ ಮಾಡಲು ಅಂಜಲಿಯನ್ನು ಕೇಳುತ್ತಾನೆ. ಆದರೆ ಅಂಜಲಿ ನಿರಾಕರಿಸಿದ್ದಳು. ಮದ್ಯದ ಅಮಲಿನಲ್ಲಿದ್ದ ಲಲ್ಲನ್ ಕೋಪಗೊಂಡು ಅಂಜಲಿಯನ್ನು ಸುತ್ತಿಗೆ ಮತ್ತು ಬೆ ಲ್ಟ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದ.
ಗುರುಗ್ರಾಮದ ಚೌಮಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ 32 ವರ್ಷದ ಅಂಜಲಿಯ ಶವವನ್ನು ಗುರುಗ್ರಾಮ್ ಪೊಲೀಸರು ಪತ್ತೆ ಮಾಡಿದ್ದಾರೆ. ಮೃತದೇಹವನ್ನು ಮೊದಲು ಕೇರ್ ಟೇಕರ್ ನೋಡಿದ್ದು, ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರು ಲಲ್ಲನ್ ಯಾದವ್ ನನ್ನು ಬಂಧಿಸಿದ್ದಾರೆ. ಅಂಜಲಿ ತನ್ನ ಹೆಂಡತಿಯಲ್ಲ ಮತ್ತು ಆರು ವರ್ಷಗಳ ಹಿಂದೆ ತನ್ನ ಹೆಂಡತಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾಳೆ ಎಂದು ಲಲನ್ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


