ಹುಬ್ಬಳ್ಳಿ: ಲೋಕಸಭಾ ಚುನಾವಣೆ ಎದರಿಸಲು ಬಿಜೆಪಿಗೆ ಪಾಕಿಸ್ತಾನದಿಂದ ಹಣ ಬರುತ್ತಿದೆ ಎಂದು ಕೆಲ ಸಮಯದ ಹಿಂದೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು.
ಇದೀಗ ಈ ಕುರಿತು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ದುಡ್ಡು ಕಾಂಗ್ರೆಸ್‌ಗೆ ಬಂದಿರಬೇಕು. ಅದು ಬಿಜೆಪಿಗೆ ಬಂದಿಲ್ಲ ಎಂದು ಕುಟುಕಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಕಿಸ್ತಾನದಿಂದ ಬಿಜೆಪಿಗೆ ಹಣ ಬಂದಿದೆ ಎಂಬ ಆರೋಪಕ್ಕೆ ಕಿಡಿಕಿಡಿಯಾದರು. ಕಾಂಗ್ರೆಸಿಗೆ ಹಣ ಬಂದಿದೆ. ಬಿಜೆಪಿಗೆ ಇಂತಹ ಹಣದ ಅವಶ್ಯಕತೆ ಇಲ್ಲ ಎಂದರು.
ಅಲ್ಲದೆ ಈಗಾಗಲೇ ಚುನಾವಣೆ ದಿನಾಂಕ ನಿಗದಿಯಾಗಿದೆ. ಕ್ಯಾಲೆಂಡರ್ ಆಫ್ ದಿ ಇವೆಂಟ್ ಕೂಡ ಬಂದಿದೆ. ಈ ನಿಟ್ಟಿನಲ್ಲಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಎರಡು ಅವಧಿಯ ಮೋದಿ ನೇತೃತ್ವದ ಸರ್ಕಾರದ ನಿಯತ್ತನ್ನು ನೋಡಿ ಈ ಬಾರಿ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


