ತುಮಕೂರು: ಖಾಸಗಿ ಬಸ್ ನಲ್ಲಿ ಆ್ಯಸಿಡ್ ಸಾಗಿಸುತ್ತಿದ್ದ ವೇಳೆ ಆ್ಯಸಿಡ್ ಇದ್ದ ಡಬ್ಬಿ ಸಿಡಿದು ಐವರು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ತುಮಕೂರು ತಾಲೂಕು ಗುಳೂರು ಬಳಿ ನಡೆದಿದೆ.
ಟಾಯ್ಲೆಟ್ ಗೆ ಬಳಸುವ ಆ್ಯಸಿಡ್ ಬಾಟಲ್ ಸ್ಪೋಟಹೊಂದಿದೆ. ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಸ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿವೆ. ನಾಜೀಯಾ ಸುಲ್ತಾನ್, ರಾಜಲಕ್ಷ್ಮೀ ಗಾಯಗೊಂಡವರಾಗಿದ್ದು, ಆಸಿಡ್ ಸಾಗಿಸುತ್ತಿದ್ದ ಶಕೀಲಾ ಬಾನು ಕೈಗೆ ಸಹ ಗಾಯವಾಗಿದೆ.
ಖಾಸಗಿ ಬಸ್ ನಲ್ಲಿ ಆ್ಯಸಿಡ್ ಬಾಟಲ್ ಇಟ್ಟುಕೊಂಡು ತುಮಕೂರು ಕಡೆ ಬರುತ್ತಿದ್ದ ಮಹಿಳೆಯು ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಲ್ಲಿ ಬಸ್ ಹತ್ತಿದರು.
ಈ ವೇಳೆ ಖಾಸಗಿ ಬಸ್ ನಲ್ಲಿ ಆ್ಯಸಿಡ್ ತುಂಬಿದ್ದ ಬಾಟಲ್ ಸ್ಪೋಟಗೊಂಡಿದೆ. ಒಂದು ಕ್ಷಣ ಖಾಸಗಿ ಬಸ್ ನಲ್ಲಿದ್ದ ಪ್ರಯಾಣಿಕರು ಶಾಕ್ ಆಗಿದ್ದರು.
ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯವಾದವರನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೇಲ್ನೋಟಕ್ಕೆ ಬಾಟಲ್ ನಲ್ಲಿ ಆ್ಯಸಿಡ್ ಒತ್ತಡ ಹೆಚ್ಚಾಗಿ ಸ್ಪೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296