nammatumakuru

    Subscribe to Updates

    Get the latest creative news from FooBar about art, design and business.

    What's Hot

    ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ

    September 18, 2025

    ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    September 18, 2025

    ತುಮಕೂರು: ಸಮೀಕ್ಷೆಯಿಂದ ಕೈ ಬಿಡಲು ಆಶಾ ಕಾರ್ಯಕರ್ತೆಯರಿಂದ ಆಗ್ರಹ

    September 18, 2025
    Facebook Twitter Instagram
    ಟ್ರೆಂಡಿಂಗ್
    • ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ
    • ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
    • ತುಮಕೂರು: ಸಮೀಕ್ಷೆಯಿಂದ ಕೈ ಬಿಡಲು ಆಶಾ ಕಾರ್ಯಕರ್ತೆಯರಿಂದ ಆಗ್ರಹ
    • ರಾಜ್ಯದಲ್ಲಿರೋದು ಚುನಾಯಿತ  ಸರ್ಕಾರ ಅಲ್ಲ, ಮಾಫಿಯಾ ಸರ್ಕಾರ: ಆರ್‌.ಅಶೋಕ್‌ ಆರೋಪ
    • ಧರ್ಮಸ್ಥಳ ಕೇಸ್: ಬಂಗ್ಲಗುಡ್ಡದಲ್ಲಿ ಮತ್ತೆ ಎಸ್ ಐಟಿಯಿಂದ ಶೋಧ ಕಾರ್ಯ ಆರಂಭ
    • ಬೆಳೆ ಸಾಲ ಮನ್ನಾ: ಬೇಡಿಕೆ ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ
    • 3ನೇ ಮಹಡಿಯಿಂದ ಬಾಲಕಿಯನ್ನು ತಳ್ಳಿ ಹತ್ಯೆ ಕೇಸ್: ಸ್ಫೋಟಕ ಮಾಹಿತಿ ಹಂಚಿಕೊಂಡ ಎಸ್ ಪಿ
    • ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮನೆ ಕೆಲಸದಲ್ಲೂ ವಿಶ್ವದಲ್ಲಿ ಭಾರತೀಯ ಮಹಿಳೆಯರೇ ಮುಂದೆ
    ರಾಷ್ಟ್ರೀಯ ಸುದ್ದಿ March 25, 2024

    ಮನೆ ಕೆಲಸದಲ್ಲೂ ವಿಶ್ವದಲ್ಲಿ ಭಾರತೀಯ ಮಹಿಳೆಯರೇ ಮುಂದೆ

    By adminMarch 25, 2024No Comments2 Mins Read
    work

    ಭಾರತದಲ್ಲಿ ಜಾಸ್ತಿ ಮನೆ ಕೆಲಸ ಮಾಡುವವರು ಯಾರು ಗಂಡಸರಾ ಹೆಂಗಸರಾ ಅಂತ ಯಾರನ್ನಾದರೂ ಕೇಳಿದರೆ ಥಟ್ಟನೆ ಸರಿ ಉತ್ತರ ಬಂದೇ ಬರುತ್ತೆ. ಅದು ಹೆಂಗಸರು ಅಂತ.

    ಅದೇ ಪ್ರಶ್ನೆಯನ್ನು ಸ್ವಲ್ಪ ವಿಸ್ತರಿಸಿ ಕೇಳಿ. “ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು ಪುರುಷರಿಗಿಂತ ಎಷ್ಟು ಪಟ್ಟು ಹೆಚ್ಚು, ಈ ವೇತನವಿಲ್ಲದ ಮನೆಕೆಲಸ ಹಾಗೂ ಆರೈಕೆ ಕೆಲಸಗಳನ್ನು ಮಾಡುತ್ತಾರೆಂದು? ರೆಡಿಮೇಡ್ ಉತ್ತರ ನಿಮ್ಮಲ್ಲಿ ಇಲ್ಲ ಅಲ್ಲವೇ? ಈಗ ಅದಕ್ಕಾಗಿ ಉತ್ತರ ಹುಡುಕುತ್ತಾ ಅಧ್ಯಯನವೊಂದು ನಡೆದಿದೆ. ಆ ಸ್ಟಡಿ, ಇಂಟರೆಸ್ಟಿಂಗ್ ಮಾಹಿತಿಯನ್ನು ಹೊರಹಾಕಿದೆ. ಭಾರತದ ಮಹಿಳೆಯರು ವಿಶ್ವದ ಇತರ ದೇಶಗಳಿಗಿಂತ ಬರೋಬ್ಬರಿ 10 ಪಟ್ಟು ಹೆಚ್ಚು ಮನೆ ಕೆಲಸ ಮಾಡುತ್ತಾರಂತೆ!


    Provided by
    Provided by
    Provided by

    ಇದು ಮುಂಬೈನಲ್ಲಿರುವ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ಜಂಟಿಯಾಗಿ ನಡೆಸಿದ ಸಂಶೋಧನೆಯಾಗಿದ್ದು, ಅಲ್ಲಿ ನಮ್ಮ ಭಾರತೀಯ ಮಹಿಳೆಯರ ಮನೆಕೆಲಸದ ತೀವ್ರತೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

    ಮನೆ ಕೆಲಸದಲ್ಲೂ ವಿಶ್ವದಲ್ಲಿ ನಮ್ಮ ಮಹಿಳೆಯರೇ ಮುಂದೆ:

    ಪುರುಷರಿಗಿಂತ ಭಾರತೀಯ ಮಹಿಳೆಯರು ಮನೆಕೆಲಸ ಮತ್ತು ಆರೈಕೆಯಂತಹ ವೇತನವಿಲ್ಲದ ಕೆಲಸವನ್ನು 10 ಪಟ್ಟು ಹೆಚ್ಚಾಗಿ ಮಾಡುತ್ತಿದ್ದು, ವಿದ್ಯಾವಂತ ಮಹಿಳೆಯರು ತಮ್ಮ ಕೆಲಸದ ಹೊರೆ ನಿಯಂತ್ರಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದಾರೆಂದು ಕೂಡಾ ವರದಿ ಬಹಿರಂಗಪಡಿಸಿದೆ.

    ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿ ಏನೆಂದರೆ ಭಾರತದಲ್ಲಿ ಅವಿವಾಹಿತ ಮಹಿಳೆಯರು ವಿವಾಹಿತ ಮಹಿಳೆಯರಿಗಿಂತ ಕಡಿಮೆ ಕೆಲಸ ಮಾಡುತ್ತಿರುವುದು. ಅಂದರೆ ಕೌಟುಂಬಿಕ ಜವಾಬ್ದಾರಿ ಬಂದ ನಂತರ ಮಾತ್ರ ಅವರು ಮನೆ ಕೆಲಸಕ್ಕೆ ಇಳಿಯುತ್ತಿರುವುದು ಸೋಜಿಗದ ವಿಷಯ. ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ, ನಮ್ಮ ವಿವಾಹಿತ ಮಹಿಳೆಯರು, ಬಹುತೇಕ ದುಪ್ಪಟ್ಟು ಪ್ರಮಾಣದಲ್ಲಿ ವೇತನವಿಲ್ಲದ ಕೆಲಸದ ಹೊರೆ ಹೊಂದಿದ್ದಾರೆ ಅನ್ನುತ್ತಿದೆ ಈ ಸಂಶೋಧನೆ. ಅದರಲ್ಲೂ, ಹಿಂದು, ಮುಸ್ಲಿಂ ಮತ್ತು ಸಿಖ್ ಕುಟುಂಬಗಳ ಮಹಿಳೆಯರು ಹೆಚ್ಚಿನ ಸಮಯವನ್ನು ‘ವೇತನವಿಲ್ಲದ ಮನೆಕೆಲಸ’ಕ್ಕಾಗಿ ವ್ಯಯಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

    ವಿಶ್ವದ ಉಳಿದ ಕಡೆ ಮಹಿಳೆಯರ ಮನೆ ಕೆಲಸ ಪರಿಸ್ಥಿತಿ:

    ವಿಶ್ವಾದ್ಯಂತ ಮಹಿಳೆಯರು ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಸಮಯವನ್ನು ವೇತನರಹಿತ ಮನೆಕೆಲಸ ಮತ್ತು ಆರೈಕೆ ಕೆಲಸಗಳಲ್ಲಿ ಕಳೆಯುತ್ತಾರಂತೆ. ಆದರೆ, ಭಾರತದಲ್ಲಿನ ಮಹಿಳೆಯರು ಪುರುಷರಿಗಿಂತ ಸುಮಾರು 10 ಪಟ್ಟು ಹೆಚ್ಚು ಸಮಯವನ್ನು ಸಂಬಳವಿಲ್ಲದ ಕೆಲಸಕ್ಕಾಗಿ ಕಳೆಯುತ್ತಾರೆ” ಎಂದು ಅಧ್ಯಯನ ವಿವರಿಸಿದೆ.

    ಅದರಲ್ಲೂ ಶಾಲಾ ವಯಸ್ಸಿನ ಮಕ್ಕಳನ್ನು ಸಲಹುವುದಕ್ಕೆ ಮಹಿಳೆಯರು ಹೆಚ್ಚು ಸಮಯವನ್ನು ಕಳೆಯುತ್ತಾರೆ. ಅಲ್ಲದೆ, ವಿಭಕ್ತ ಕುಟುಂಬದಲ್ಲಿ ವಾಸಿಸುವ ಮಹಿಳೆಯರು, ಅಂದರೆ ಗಂಡ ಮತ್ತು ಮಕ್ಕಳ ಜೊತೆ ವಾಸಿಸುವ ಸಣ್ಣ ಕುಟುಂಬದ ಮಹಿಳೆಯರು, ಅವಿಭಕ್ತ ಕುಟುಂಬಗಳ ಮಹಿಳೆಯರಿಗಿಂತ ವೇತನವಿಲ್ಲದ ಕೆಲಸವನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಅಲ್ಲದೆ, ಸ್ತ್ರೀ ಪ್ರಧಾನ ಕುಟುಂಬಗಳಲ್ಲಿ ಮಹಿಳೆಯರ ವೇತನರಹಿತ ಕೆಲಸ ಕಡಿಮೆಯಿದೆ. ಅದಕ್ಕೆ ವಿರುದ್ಧವಾಗಿ ಪುರುಷ ಪ್ರಧಾನ ಕುಟುಂಬಗಳಲ್ಲಿ ಈ ಸಂಬಳರಹಿತ ಕೆಲಸದ ಹೊರೆ ಹೆಚ್ಚಾಗಿದೆ.

    ವಿಶ್ವದ ಆರ್ಥಿಕತೆಯಲ್ಲಿ ಮಹಿಳೆಯರ ಸಿಂಹಪಾಲು:

    ಈ ಮನೆ ಕೆಲಸಗಳ ವೇತನವಿಲ್ಲದ ಉದ್ಯೋಗಗಳನ್ನು ಮಾರುಕಟ್ಟೆ ಮೌಲ್ಯಗಳ ಆಧಾರದ ಮೇಲೆ ಅಳೆದು ನೋಡಿದರೆ, ವಿಶ್ವದ ಆರ್ಥಿಕತೆಗೆ ಮಹಿಳೆಯರ ಕೊಡುಗೆಯು ಅಪಾರವಾಗಿದೆ ಎನ್ನುವ ಅಂಶವನ್ನು ಈ ವರದಿ ಗಮನ ಸೆಳೆದಿದೆ.

    ಆರ್ಥಿಕತೆಯ ಮೇಲೆ ಮಹಿಳೆಯರ ಪ್ರಭಾವ ಎಷ್ಟರ ಮಟ್ಟಿಗೆ ಇದೆಯೆಂದರೆ, ಕೆಲ ದೇಶಗಳಲ್ಲಿ ಮಹಿಳೆಯರ ವೇತನರಹಿತ ಕೆಲಸ ಆ ದೇಶದ ಜಿಡಿಪಿಗೆ ಶೇ.10 ರಷ್ಟು ಕೊಡುಗೆ ನೀಡಿದರೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಜಿಡಿಪಿಗೆ ಅವರ ಕೊಡುಗೆ ಶೇ.60 ಎಂದು ಲೆಕ್ಕಾಚಾರ ಮಾಡಲಾಗಿದೆ.

    ಮತ್ತೊಂದು ಗುದುಹೋದ ಅಂಶವೇನೆಂದರೆ, ನಗರ ಪ್ರದೇಶದ ಶಿಕ್ಷಣ ಇಲ್ಲದ ಮಹಿಳೆಯರು ಹೆಚ್ಚು ಮನೆ ಕೆಲಸ ಮಾಡುತ್ತಿರುವುದು. ಶಿಕ್ಷಣವಿಲ್ಲದ ನಗರ ಪ್ರದೇಶದ ಮಹಿಳೆಯರು, ಶಿಕ್ಷಣವಿಲ್ಲದ ಗ್ರಾಮೀಣ ಪ್ರದೇಶದ ಮಹಿಳೆಯರಿಗಿಂತ ಶೇಕಡಾ 86.7 ಕ್ಕಿಂತಲೂ ಹೆಚ್ಚು ಸಮಯ ಸಂಬಳವಿಲ್ಲದ ಮನೆಕೆಲಸದಲ್ಲಿ ಕಳೆಯುತ್ತಾರೆಂದು ವರದಿ ತಿಳಿಸಿದೆ. ಒಟ್ಟಾರೆ ಮಹಿಳೆಯರು, ತಮಗೆ ಶಿಕ್ಷಣ ಇಲ್ಲದೆ ಹೋದರೂ ವಿಶ್ವದ ಆರ್ಥಿಕತೆಯಲ್ಲಿ ಸಿಂಹಪಾಲು ಪಡೆದು ಕೊಳ್ಳುತ್ತಿರುವುದು ಗಮನಾರ್ಹ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ

    September 18, 2025

    ಕಾರವಾರ: ಭಟ್ಕಳದ ಮುಗ್ಗುಮ್ ಕಾಲೋನಿಯಲ್ಲಿ ದನಗಳನ್ನು ಕೊಂದು, ಅವಶೇಷಗಳನ್ನು ಸಮೀಪದ ಅರಣ್ಯ ಭೂಮಿಯಲ್ಲಿ ಎಸೆದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ…

    ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    September 18, 2025

    ತುಮಕೂರು: ಸಮೀಕ್ಷೆಯಿಂದ ಕೈ ಬಿಡಲು ಆಶಾ ಕಾರ್ಯಕರ್ತೆಯರಿಂದ ಆಗ್ರಹ

    September 18, 2025

    ರಾಜ್ಯದಲ್ಲಿರೋದು ಚುನಾಯಿತ  ಸರ್ಕಾರ ಅಲ್ಲ, ಮಾಫಿಯಾ ಸರ್ಕಾರ: ಆರ್‌.ಅಶೋಕ್‌ ಆರೋಪ

    September 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.