ತುಮಕೂರು: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನು ಕೊರಟಗೆರೆ ಪೊಲೀಸರು ಹೆಡೆಮುರಿಕಟ್ಟಿದ್ದು, ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಯನ್ನು ನಿವಾರಿಸಿದ್ದಾರೆ.
ಕೊರಟಗೆರೆ ತುಮಕೂರು ಮಾರ್ಗ ಮಧ್ಯದಲ್ಲಿ ಅಜ್ಜಿಹಳ್ಳಿ ಸಮೀಪಗ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಸುಮಾರು ನಾಲ್ಕು ಬೈಕ್ ವಶಪಡಿಸಿಕೊಂಡು 7 ಜನ ಪುಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಯಿದ್ ಖಾನ್(19), ಸಲ್ಮಾನ್ (20), ಸಾದತ್ ಪಾಷ(20), ನಸೀಬ್‍ಉಲ್ಲಾ (19) ಸಾಧಿಕ್ ಪಾಷ(19), ಫರ್ದೀನ್ ಖಾನ್(21), ಇಸ್ಮಾಯಿಲ್(20) ವರ್ಷದ ಬಂಧಿತ ಆರೋಪಿಗಳಾಗಿದ್ದಾರೆ.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ರವರ ಮಾಹಿತಿ ಮೇರೆಗೆ ಕೊರಟಗೆರೆ ಪೊಲೀಸ್ ಅಧಿಕಾರಿಗಳು ಕ್ಷಿಪ್ರವಾಗಿ ಕ್ರಮಕೈಗೊಂಡಿದ್ದು, ಪುಂಡರ ಬೈಕ್ ವ್ಹೀಲಿಂಗ್ ಗೆ ಬ್ರೇಕ್ ಹಾಕಿದ್ದಾರೆ.
ರಸ್ತೆಗಳಲ್ಲಿ ಬೈಕ್ ನಲ್ಲಿ ಹೋಗುವಾಗ ಹೆಲ್ಮೆಟ್ ಇಲ್ಲದೆ ಹೋಗುವುದೇ ಮೊದಲನೇ ತಪ್ಪು, ಅದರಲ್ಲಿಯೂ ಈ ಪುಂಡರು ವೀಲಿಂಗ್ ಮಾಡುತ್ತಾ ವಾಹನ ಸವರರಿಗೆ ಕಿರಿಕಿರಿ ಮಾಡಿದ್ದಾರೆ. ಇತರ ವಾಹನ ಸವಾರರಿಗೆ ಸೈಡ್ ಕೊಡದೆ ರಸ್ತೆ ಮಧ್ಯದಲ್ಲಿ ವೀಲಿಂಗ್ ಮಾಡುತ್ತಾ ಪುಂಡಾಟಿಕೆ ಮೆರೆದಿದ್ದಾರೆ.
ಇನ್ನು ಮುಂದಾದರೂ ಪೋಷಕರು ತಮ್ಮ ಮಕ್ಕಳಿಗೆ ಬೈಕ್ ಗಳನ್ನು ಕೊಡುವ ಮುನ್ನ ಎಚ್ಚರವಹಿಸಬೇಕಿದೆ. ಇವರು ಮಾಡುವ ಪುಂಡಾಟಿಕೆಯಿಂದ ಇವರ ಜೀವಕ್ಕೆ ಮಾತ್ರವಲ್ಲದೇ ಅಮಾಯಕ ಪ್ರಾಣಿಗಳಿಗೆ ಕುತ್ತು ಬರಬಹುದು.
ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಹಾಗೂ ಪೊಲೀಸ್ ಉಪಾಧೀಕ್ಷಕರಾದ ರಾಮಚಂದ್ರಪ್ಪ ಹಾಗೂ ತಾಲೂಕಿನ ಸಾರ್ವಜನಿಕರು ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪುಂಡರು ತುಮಕೂರಿನಿಂದ ಕೊರಟಗೆರೆಗೆ ಬಂದು ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ತುಮಕೂರು ಮೂಲದ ಗೇರಹಳ್ಳಿ ಗ್ರಾಮದ ಯುವಕರೇ ಈ ಪುಂಡರು ಎಂದು ತಿಳಿದುಬಂದಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296