ಬೆಂಗಳೂರು: ಸ್ನೇಹಿತನ ಖಾಸಗಿ ಅಂಗ (ಗುದದ್ವಾರ) ಕ್ಕೆ ಸ್ನೇಹಿತನೋರ್ವ ಗಾಳಿ ಬಿಟ್ಟ ಪರಿಣಾಮ ಯುವಕನ ಕರುಳು ಬ್ಲಾಸ್ಟ್ ಆಗಿ ಮೃತ ಹೊಂದಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಯೋಗೀಶ್(28) ಎಂಬಾತನೇ ಮೃತ ಯುವಕ. ಈ ಘಟನೆ ಮಾರ್ಚ್ 25 ರಂದು ನಡೆದಿದೆ. ಅಂದು ಬೈಕ್ ರಿಪೇರಿಗೆಂದು ಸಂಪಿಗೆಹಳ್ಳಿಯ ನಿವಾಸಿ ಯೋಗೇಶ್ ಬೈಕ್ ಸರ್ವಿಸ್ ಸೆಂಟರ್ಗೆ ಹೋಗಿದ್ದಾನೆ. ಅಲ್ಲಿ ಸ್ನೇಹಿತ ಮುರಳಿ ಕೆಲಸ ಮಾಡುತ್ತಿದ್ದು, ಆತ ಗಾಡಿ ಸರ್ವಿಸ್ ಮಾಡಿದ್ದಾನೆ. ಅನಂತರ ಮುರಳಿ ಏರ್ ಫ್ರೆಶರ್ ಪೈಪ್ ನಿಂದ ಸ್ನೇಹಿತ ಯೋಗೇಶ್ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಪರಿಣಾಮ ಆತನ ಕರುಳು ಬ್ಲಾಸ್ಟ್ ಆಗಿ ಯುವಕ ಮೃತ ಹೊಂದಿದ್ದಾನೆ.
ಇದೀಗ ಈ ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುರಳಿಯ ಬಂಧನ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


