nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್

    November 6, 2025

    ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

    November 6, 2025

    ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ

    November 6, 2025
    Facebook Twitter Instagram
    ಟ್ರೆಂಡಿಂಗ್
    • ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
    • ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
    • ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
    • ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
    • ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
    • ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
    • ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
    • ಖ್ಯಾತ ಖಳನಟ ಹರೀಶ್ ರಾಯ್  ನಿಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೃತ್ಯು ಪತ್ರ ( will deed) ಉಯಿಲು ಪತ್ರ | ಕಾನೂನು ಮಾಹಿತಿ | ವಿಶೇಷ ಸಂಚಿಕೆ 01
    ಸ್ಪೆಷಲ್ ನ್ಯೂಸ್ December 13, 2021

    ಮೃತ್ಯು ಪತ್ರ ( will deed) ಉಯಿಲು ಪತ್ರ | ಕಾನೂನು ಮಾಹಿತಿ | ವಿಶೇಷ ಸಂಚಿಕೆ 01

    By adminDecember 13, 2021No Comments3 Mins Read
    marigowda badaradinni

    ಮೃತ್ಯು ಪತ್ರ ಯಾರು ಬರೆಯಬಹುದು ..?

    ಮೃತ್ಯು ಪತ್ರ ರದ್ದು ಪಡಿಸಬಹುದೆ..?


    Provided by
    Provided by

    ಯಾವ ವ್ಯಕ್ತಿ ಯಾವ ಆಸ್ತಿಯ ಉಯಿಲು ಮಾಡಬಹುದು..?

    ಯಾರು ವಿಶೇಷ ಮೃತ್ಯ ಪತ್ರ ಬರೆಯಬಹುದು..?

    ಮನಸ್ಸಿದ್ದಲ್ಲಿ ಮಾರ್ಗ, ಉಯಿಲಿದ್ದಲ್ಲಿ ನೆಂಟ.’ ಇದು ಹಿರಿಯರ ಮಾತು. ಒಬ್ಬ ವ್ಯಕ್ತಿ, ತಾನು ಸಂಪಾದಿಸಿದ ಆಸ್ತಿಯನ್ನು, ತನ್ನ ಮರಣಾನಂತರ ಅದು ಯಾರಿಗೆ ಹೋಗಬೇಕು ಎಂದು ಮನಸ್ಸು ಮಾಡಿ ನಿರ್ಧಾರ ತಾಳಿ, ಮನಸ್ಸಿನ ಆ ನಿರ್ಧಾರದಂತೆ ಬರೆದಿಡುವ ಒಂದು ದಾಖಲೆ

    ಮೃತ್ಯು ಪತ್ರವನ್ನು ಅಥವಾ ಉಯಿಲು ಪತ್ರ ಎಂತಲೂ ಕರೆಯುತ್ತಾರೆ ಆಂಗ್ಲ ಭಾಷೆಯಲ್ಲಿ will deed ಎಂತಲೂ ಕರೆಯುತ್ತಾರೆ ಒಬ್ಬ ವ್ಯಕ್ತಿಯು ತಾನು ಮರಣಾನಂತರ ತನ್ನ ಆಸ್ತಿಯ ವಿಲೇವಾರಿಗೆ ಸಂಬಂಧಿಸಿದಂತೆ ಇರುವ ತನ್ನ ಅಪೇಕ್ಷೆಯನ್ನು ಅಥವಾ ಇಚ್ಛೆಯನ್ನು ತಿಳಿಸಿ ಕಾನೂನಿನನ್ವಯ ಮಾಡುವ ಘೋಷಣೆಯೇ ಉಯಿಲು ಅಥವಾ ಮೃತ್ಯುಪತ್ರ ಎಂಬುದಾಗಿ ಭಾರತೀಯ ವಾರಸಾ ಅಧಿನಿಯಮ, 1925 Indian Succession Act, 1925 ದ ಕಲಂ 2ಎಚ್ ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ.

    ಇದರ ಅನ್ವಯ ಉಯಿಲು(ಮೃತ್ಯು ಪತ್ರ) ಎಂದರೆ…

     

    1) ಒಬ್ಬ ವ್ಯಕ್ತಿಯು ಕಾನೂನಿನನ್ವಯ ಮಾಡಿದ ಘೋಷಣೆ.

    2) ಆ ಘೋಷಣೆಯು ಕಾನೂನುಬದ್ಧವಾಗಿ ಇರಬೇಕು: ಅಂದರೆ ವ್ಯಕ್ತಿಯು ಯಾವ ಆಸ್ತಿಯ ಸಂಬಂಧವಾಗಿ ಘೋಷಣೆಯನ್ನು ಮಾಡಿರುತ್ತಾನೆಯೋ ಅಂತಹ ಆಸ್ತಿಯನ್ನು ಆತನು ತನ್ನ ಜೀವಿತಾವಧಿಯಲ್ಲಿ ವಿಲೇವಾರಿ ಮಾಡುವ ಅಧಿಕಾರವನ್ನು ಹೊಂದಿರಬೇಕು.

    3) ಆ ಘೋಷಣೆಯು ಆತನ ಮರಣಾನಂತರ ಆತನ ಆಸ್ತಿಯ ವಿಲೇವಾರಿಗೆ ಸಂಬಂಧಿಸಿದಂತೆ ಆತನ ಅಪೇಕ್ಷೆ ಅಥವಾ ಇಚ್ಛೆಯನ್ನು ತಿಳಿಸುವಂತಿರಬೇಕು.  ಅಲ್ಲದೆ ಆತನ ಉಯಿಲು ಮಾಡುವ ಸಾಮರ್ಥ್ಯವನ್ನು ಹೊಂದಿರತಕ್ಕದ್ದು.

    ಉಯಿಲು ಲಿಖಿತರೂಪದಲ್ಲಿ ಇರಬೇಕು. ಆದರೆ ಉಯಿಲು ಕರ್ತನು (Testartor) ಯುದ್ಧದಲ್ಲಿ ನಿರತನಾದ ಸೈನಿಕ, ವೈಮಾನಿಕ, ಅಥವಾ ನಾವಿಕ ದರ್ಜೆಯ ಅಧಿಕಾರಿ ಆಗಿದ್ದರೆ ಆತನು ವಿಶೇಷ ಸಂದರ್ಭಗಳಲ್ಲಿ ಭಾಗಶಃ ಲಿಖಿತ ಮತ್ತು ಭಾಗಶಃ ಮೌಖಿಕ ಅಥವಾ ಸಂಪೂರ್ಣವಾಗಿ ಮೌಖಿಕ ಉಯಿಲನ್ನು ಮಾಡಬಹುದು. ( Partly written, Partly oral or Fully Oral). ಇಂತಹ ಉಯಿಲಿಗೆ ವಿಶೇಷ ಉಯಿಲು (Privileged Pill) ಎಂದು ವ್ಯಾಖ್ಯಾನಿಸಲಾಗಿದೆ.

    ವಿಶೇಷ ಉಯಿಲನ್ನು ಹೊರತುಪಡಿಸಿ ಇತರ ವಿಶೇಷವಲ್ಲದ  ಉಯಿಲುಗಳೆಲ್ಲವೂ ( UNPRIVILIGED WILL) ಲಿಖಿತರೂಪದಲ್ಲಿಯೇ  ಇರತಕ್ಕದ್ದು.

    ವಿಶೇಷವಲ್ಲದ ಉಯಿಲನ್ನು   (Unprivileged  Will) ಯಾರು ಮಾಡಬಹುದು?

    ಅಪ್ರಾಪ್ತ ವಯಸ್ಕನಲ್ಲದ ಅಂದರೆ 18 ವರ್ಷಗಳ ವಯಸ್ಸನ್ನು ಪೂರೈಸಿದ ಮತ್ತು ಮಾನಸಿಕ ಸ್ವಾಸ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಯು ವಿಶೇಷವಲ್ಲದ ಉಯಿಲನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

    1) ಒಬ್ಬ ವಿವಾಹಿತ ಮಹಿಳೆ ಯಾವ ಆಸ್ತಿಯನ್ನು ತನ್ನ ಜೀವಿತಕಾಲದಲ್ಲಿ ವಿಲೇವಾರಿ  (ಪರಭಾರೆ) (Sale, Lease, Rent, Mortgage, etc) ಮಾಡುವ ಹಕ್ಕನ್ನು ಹೊಂದಿರುತ್ತಾರೆಯೋ ಅಂತಹ ಆಸ್ತಿಗೆ ಸಂಬಂಧಿಸಿದಂತೆ ಉಯಿಲನ್ನು ಮಾಡಬಹುದು.

    2 ) ಕಿವುಡ, ಮೂಗ ಅಥವಾ ಕುರುಡ ವ್ಯಕ್ತಿ ತಾನು ಮಾಡುತ್ತಿರುವ ಕೃತ್ಯದ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದಲ್ಲಿ ಅಂತಹ ವ್ಯಕ್ತಿಯೂ ಸಹ ತನ್ನ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಉಯಿಲನ್ನು ಮಾಡಬಹುದು.

    3) ಯಾವುದೇ ವ್ಯಕ್ತಿಯು ಕೆಲವು ಸಮಯದಲ್ಲಿ ಮಾತ್ರ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಮತ್ತೆ ಕೆಲವು ಸಮಯದಲ್ಲಿ ಸ್ವಸ್ಥ ನಾಗಿರುತ್ತಾನೆ (Partial Insanity) ಅಂತಹ ವ್ಯಕ್ತಿಯು ಮಾನಸಿಕವಾಗಿ ಸ್ವಸ್ಥ ನಾಗಿದ್ದ ಸಮಯದಲ್ಲಿ ಮಾತ್ರವೇ ಉಯಿಲನ್ನು ಮಾಡಬಹುದು.

    ಯಾವುದೇ ವ್ಯಕ್ತಿಯು ಮತ್ತು ತರಿಸುವ ಪದಾರ್ಥದ (Under the Influence of Intoxication) ಸೇವನೆಯಿಂದಾಗಿ    ಅಥವಾ ಯಾವುದೇ ರೀತಿಯ ಅನಾರೋಗ್ಯದಿಂದಾಗಿ ಅಥವಾ ಬೇರಾವುದೇ  ಕಾರಣದಿಂದ ತಾನು ಮಾಡುತ್ತಿರುವುದೇನು ಎಂಬುದರ ತಿಳುವಳಿಕೆ , ಪರಿಜ್ಞಾನ ವಿಲ್ಲದ ಸ್ಥಿತಿಯಲ್ಲಿದ್ದಾಗ ಉಯಿಲನ್ನು ಮಾಡುವಂತಿಲ್ಲ. ಮಾಡಿದರು ಅದು ಅನುರ್ಜಿತ.

    ವ್ಯಕ್ತಿಯೊಬ್ಬನು ಬೇರೊಬ್ಬರ ಬೆದರಿಕೆಗೆ, ಪ್ರಲೋಭನೆಗೆ, ಮರುಳು ಮಾತಿಗೆ ಅಥವಾ ಮೋಸಕ್ಕೆ ಒಳಗಾಗಿದ್ದ ಸಮಯದಲ್ಲಿ ಮಾಡಿದ ಉಯಿಲು ಊರ್ಜಿತವಾಗಿ ಇರುವುದಿಲ್ಲ. (Intimidation, Temptation, Mis-    Representation, Undue Influence.)

    ಉಯಿಲನ್ನು ಮಾಡಲು ಕಾನೂನಿನನ್ವಯ ಸಮರ್ಥರಲ್ಲದವರರು ಅಂದರೆ ಅಪ್ರಾಪ್ತ ವಯಸ್ಕರ (Minor) ಅಥವಾ    ಬುದ್ಧಿಭ್ರಮಣೆಯ (Idiocy) ಅವರ ಪರವಾಗಿ ಅವರ ಪಾಲಕರು ಅಥವಾ ಪೋಷಕರು ಉಯಿಲನ್ನು ಮಾಡುವಂತಿಲ್ಲ.

    ಉಯಿಲನ್ನು ಮಾಡುವಾಗ ಮುಖ್ಯವಾಗಿ ಪಾಲಿಸಬೇಕಾದ ಸಂಗತಿಗಳು:

    ಉಯಿಲು ಬರವಣಿಗೆಯಲ್ಲಿಯೇ ಇರತಕ್ಕದ್ದು: ಸಾಧ್ಯವಾದರೆ ಉಯಿಲು ಕರ್ತನು ಅದನ್ನು ತನ್ನ ಕೈಬರಹದಲ್ಲಿಯೇ  ಬರೆಯುವುದು ಸೂಕ್ತ.

    ಉಯಿಲನ್ನು ಯಾವುದೇ ಭಾಷೆಯಲ್ಲಿ ಯಾವುದೇ ಶೈಲಿಯಲ್ಲಿ ಬರೆಯಬಹುದು. ಉಯಿಲನ್ನು ಛಾಪಾ ಕಾಗದದ ಮೇಲೆಯೇ ಬರೆಯಬೇಕೆಂದೇನಿಲ್ಲ. ಉತ್ತಮ ದರ್ಜೆಯ ಯಾವುದೇ ಕಾಗದದಲ್ಲಿಯೂ ಬರೆಯಬಹುದು.

    ಉಯಿಲಿನ ಪ್ರತಿಪುಟದ ಮೇಲೆ ಉಯಿಲು ಕರ್ತನು ತನ್ನ ಸಹಿಯನ್ನು ಮಾಡಬೇಕು ಅಥವಾ ಹೆಬ್ಬೆರಳಿನ ಗುರುತನ್ನು ಹಾಕಬೇಕು. ಉಯಿಲು ದಸ್ತಾವೇಜಿಗೆ ಕನಿಷ್ಠ ಇಬ್ಬರು ವ್ಯಕ್ತಿಗಳು ‘ಸಾಕ್ಷಿಗಳೆಂದು’ (Witness) ಉಯಿಲು ಕರ್ತನು ಅದಕ್ಕೆ ಸಹಿ ಮಾಡಿದ್ದನ್ನು ಪ್ರತ್ಯಕ್ಷ ಕಂಡು ಸಹಿ ಮಾಡಬೇಕು.

    ಬಿಕ್ಕಲಂ (Document Writer) ಬರಹಗಾರ ‘ಸಾಕ್ಷಿ’ ಆಗುವುದಿಲ್ಲ.(ಉಯಿಲು ದಾಖಲೆ ಪತ್ರ ಬರೆದ ವ್ಯಕ್ತಿ Deed writer) ಉಯಿಲಿನ ಮೂಲಕ ಯಾವುದೇ ವಿಧದ ಪ್ರಯೋಜನವನ್ನು ಪಡೆಯುವ ವ್ಯಕ್ತಿ ( Beneficiary Of the will ) ಉಯಿಲಿಗೆ ಸಾಕ್ಷಿ ಹಾಕಬಾರದು. ಹಾಗೊಂದು ವೇಳೆ ಸಾಕ್ಷಿ ಹಾಕಿದಲ್ಲಿ, ಸಾಕ್ಷಿ ಹಾಕಿದ್ದು ಅನೂರ್ಜಿತವಾಗುವುದಿಲ್ಲ. ಆದರೆ ಸಾಕ್ಷಿ ಹಾಕಿದ ವ್ಯಕ್ತಿ ಅಥವಾ ಆತನ/ಆಕೆಯ ಹೆಂಡತಿ ಅಥವಾ ಗಂಡ ಉಯಿಲು ಮೂಲಕ ಪಡೆದ ಪ್ರಯೋಜನ ರದ್ದಾಗುವ ಸಂಭವವಿರುತ್ತದೆ.

    ಉಯಿಲಿನಲ್ಲಿ ತೋರಿಸಿದ ಆಸ್ತಿಗಳ ಮತ್ತು ಅವುಗಳನ್ನು ಪಡೆಯುವ ವ್ಯಕ್ತಿಗಳ ವಿವರಗಳನ್ನು ಯಾವುದೇ ಸಂದಿಗ್ಧತೆ ಅಥವಾ ಅಸ್ಪಷ್ಟತೆಗೆ ಅವಕಾಶವಿಲ್ಲದಂತೆ ಸ್ಪಷ್ಟವಾಗಿ ಮತ್ತು ಸರಿಯಾಗಿ ನಮೂದಿಸಬೇಕು.

    ……ಮುಂದುವರೆಯುವುದು ನಾಳಿನ ಸಂಚಿಕೆಯಲ್ಲಿ……

     

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

    October 10, 2025

    ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿ: ಭಾರತದ ಪರ ನಿಂತ ಚೀನಾ!

    August 8, 2025

    ಅವಳ ತುಟಿ ಮಷಿನ್‌ ಗನ್‌: ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯ ಸೌಂದರ್ಯ ಹೊಗಳಿದ ಟ್ರಂಪ್!

    August 4, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್

    November 6, 2025

    ಸರಗೂರು:  ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ  ನ.16 ರಿಂದ 18 ವರೆಗೆ ನಡೆಯಲಿದ್ದು, ಜಾತ್ರಾ  ಲಾಡು ಪ್ರಸಾದ…

    ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

    November 6, 2025

    ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ

    November 6, 2025

    ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ

    November 6, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.