ತುಮಕೂರು: ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು ಮತ್ತು ಪ್ರೈಮ್ ಸ್ಟೆಪ್ ಎಜುಕೇಶನ್, ಗುರ್ಗಾಂವ್ ಸಹಭಾಗಿತ್ವದೊಂದಿಗೆ ಎರಡು ದಿನದ ‘ಉದ್ಯೋಗದ’ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರದಲ್ಲಿ ಹಿರಿಯ ತರಬೇತುದಾರರಾದ ಕುಮಾರಿ ಆಕಾಂಷಾ ಅವರು, ಅಂತಿಮ ವರ್ಷದ ಬಿ.ಫಾರ್ಮ್, ಎಂ.ಫಾರ್ಮ್ ಮತ್ತು ಫಾರ್ಮ.ಡಿ ವಿದ್ಯಾರ್ಥಿಗಳನ್ನು ತಮ್ಮ ಭಾಷಣದಲ್ಲಿ ಸಂವಹನ ಮತ್ತು ಪ್ರಸ್ತುತಿ ಕೌಶಲ್ಯಗಳು, ಆತ್ಮವಿಶ್ವಾಸ, ಸಂದರ್ಶನ ಕೌಶಲ್ಯಗಳು ಮತ್ತು ಗುಂಪು ಚರ್ಚೆಗಳ ಬಗ್ಗೆ ಸ್ಪೂರ್ತಿದಾಯಕ ಮಾತುಗಳ ಮೂಲಕ ಪ್ರಬುದ್ಧಗೊಳಿಸಿ ವಿದ್ಯಾರ್ಥಿಗಳನ್ನು ಉತ್ತೆಜಿಸಿದರು.
ಡಾ.ಸುರೇಶ ವಿ. ಕುಲ್ಕರ್ಣಿ, ಪ್ರಾಂಶುಪಾಲರು ಕಾರ್ಯಾಗಾರದ ಉದ್ದೇಶವನ್ನು ತಿಳಿಸಿಕೊಟ್ಟರು. ಕಾಲೇಜಿನ ವಿದ್ಯಾರ್ಥಿಗಳು, ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296