ತುಮಕೂರು: ಪಿಸ್ತೂಲ್ ನಿಂದ ಶೂಟ್ ಮಾಡಿ, ಮನೆ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಎಜಾಜ್ ಮಿರ್ದಾಹ, ಸಹಿಬುಲ ಅನ್ಸಾರಿ ಎಂದು ಗುರುತಿಸಲಾಗಿದೆ.

ಮಾರ್ಚ್ 26ರಂದು ಕುಣಿಗಲ್ ತಾಲೂಕಿನ ಉರ್ಕೆಹಳ್ಳಿ ಗ್ರಾಮದಲ್ಲಿ, ರಾಷ್ಟ್ರೀಯ ಹೆದ್ದಾರಿ ಗೆ ಹೊಂದಿಕೊಂಡಂತೆ ಇರುವ ಪುಷ್ಪಲತಾ ಎಂಬವರ ಮನೆಗೆ, ನೀರು ಕೇಳುವ ನೆಪದಲ್ಲಿ ಇಬ್ಬರು ಆರೋಪಿಗಳು ಬಂದಿದ್ದರು.

ನೀರು ಕೊಡಲು ಮುಂದಾಗಿದ್ದ ವೇಳೆ ಮನೆಗೆ ನುಗ್ಗಿ ದರೋಡೆ ಮಾಡಲು ಇಬ್ಬರು ಯತ್ನಿಸಿದ್ದರು. ಅಲ್ಲದೆ ಪುಷ್ಪಲತಾ ಅವರ ತಂದೆ ಗಂಗಣ್ಣ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದರು. ಇದರಿಂದ ಗಂಗಣ್ಣ ಅವರ ಕಾಲಿಗೆ ಗಾಯವಾಗಿತ್ತು. ನಂತರ ಮನೆಯಲ್ಲಿದ್ದವರ ಕೂಗಾಟ ಚಿರಾಟ ಕೇಳಿ ಅಕ್ಕ ಪಕ್ಕದ ಮನೆಯವರು ಬರುವಷ್ಟರಲ್ಲಿ ಆರೋಪಿಗಳು ಮನೆಯಲ್ಲಿದ್ದ ಲಕ್ಷಾಂತರ ಹಣವನ್ನು ಕದ್ದು ಪರಾರಿಯಾಗಿದ್ದರು.
ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಇಬ್ಬರು ಜಾರ್ಖಂಡ್ ಮೂಲದವರಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


