ಭಾರತದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪ್ರಮುಖವಾದ ಹಾಗೂ ಹೆಚ್ಚು ಪ್ರಸಿದ್ಧಿ ಹೊಂದಿದ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಪ್ರಮುಖವಾದುದು. ಇದೀಗ ಈ ಬ್ಯಾಂಕ್ ತನ್ನ ಗ್ರಾಹಕರಿಗೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ್ದು ಫಿಕ್ಸೆಡ್ ಡೆಪಾಸಿಟ್ (FD) ನ ಬಡ್ಡಿ ಹೆಚ್ಚು ಮಾಡಿ ಆದೇಶ ಹೊರಡಿಸಿದೆ.
ಹೌದು, ಕೆನರಾ ಬ್ಯಾಂಕ್ ಗ್ರಾಹಕರಿಗೋಸ್ಕರ ನಾನಾ ರೀತಿಯ ಸೌಲಭ್ಯವನ್ನು ನೀಡುತ್ತವೆ, ಅದರ ಜೊತೆಗೆ ಹೂಡಿಕೆ ಮಾಡಿರುವವರ ಹಣಕ್ಕೆ ಬಡ್ಡಿ ದರವನ್ನು ಹೆಚ್ಚಿಸಿರುವ ಕೆನರಾ ಬ್ಯಾಂಕ್, 444 ದಿನಗಳ ಫಿಕ್ಸೆಡ್ ಡೆಪಾಸಿಟ್(Fixed deposit) ಯೋಜನೆಯನ್ನು ಹೊಂದಿರುವಂತಹ ಗ್ರಾಹಕರಿಗೆ ಸಂತೋಷದ ಸುದ್ದಿ ನೀಡಿ, ಹೂಡಿಕೆ ಮಾಡಿರುವ ಹಣಕ್ಕೆ 7% ಕ್ಕಿಂತ ಹೆಚ್ಚಿನ ಬಡ್ಡಿ ಹಣವನ್ನು ನೀಡ ಹೊರಟಿದೆ.
ಕೆನರಾ ಬ್ಯಾಂಕಿನಲ್ಲಿರುವ ನಾನಾ ರೀತಿಯಾದಂತಹ FD ಯೋಜನೆಗಳ ಪೈಕಿ ನೀವೇನಾದರೂ 444 ದಿನದ ಯೋಜನೆಯನ್ನು ಪಡೆದು, ಒಟ್ಟಿಗೆ 3 ಲಕ್ಷ ಹಣವನ್ನು ಪಾವತಿಸುತ್ತಾ ಹೋದರೆ 444 ದಿನಗಳವರೆಗೆ ನಿಮ್ಮ ಹೂಡಿಕೆ ಹಣಕ್ಕೆ 7.25% ಬಡ್ಡಿ ಹಣವು ಲಭಿಸುತ್ತದೆ. ಇದರಿಂದಾಗಿ ನಿಮ್ಮ ಒಟ್ಟು ಹಣ 3.27 ಲಕ್ಷವಾಗಲಿದೆ.
ಹೀಗೆ 444 ದಿನಗಳವರೆಗೂ ಮೂರು ಲಕ್ಷದ FD ಹಣ ನಿಮ್ಮ ಖಾತೆಯಲ್ಲಿ ಇಟ್ಟಲ್ಲಿ, ನಿಮಗೆ 27 ಸಾವಿರ ರೂಪಾಯಿ ಲಾಭವನ್ನು ದೊರೆಯಲಿದೆ. ಅಂದರೆ ಹಣವನ್ನು ಹಿಂಪಡೆಯುವಾಗ ನಿಮ್ಮ ಖಾತೆಯಲ್ಲಿ ಬರೊಬ್ಬರಿ ಮೂರು ಲಕ್ಷದ 27 ಸಾವಿರ ರೂಪಾಯಿ ಇರಲಿದೆ. ಹಿರಿಯ ನಾಗರಿಕರಿಗೆ, 7.75% ಬಡ್ಡಿಯ ಮೇರೆಗೆ ₹3,29,000 ಹಣ ದೊರೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296