nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್ | ಬಾಲಕಿಯರ ಕುಸ್ತಿ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶೋಭಾ

    September 16, 2025

    ದ್ವೇಷಭಾಷಣ: ಶಾಸಕ ಯತ್ನಾಳ್ ವಿರುದ್ಧ ತುಮಕೂರಿನಲ್ಲಿ ದೂರು ದಾಖಲು

    September 16, 2025

    ರಾಜ್ಯದಲ್ಲೂ ಜಾರಿಯಾಗುತ್ತಾ, 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ರೂಲ್ಸ್!

    September 16, 2025
    Facebook Twitter Instagram
    ಟ್ರೆಂಡಿಂಗ್
    • ಬೀದರ್ | ಬಾಲಕಿಯರ ಕುಸ್ತಿ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶೋಭಾ
    • ದ್ವೇಷಭಾಷಣ: ಶಾಸಕ ಯತ್ನಾಳ್ ವಿರುದ್ಧ ತುಮಕೂರಿನಲ್ಲಿ ದೂರು ದಾಖಲು
    • ರಾಜ್ಯದಲ್ಲೂ ಜಾರಿಯಾಗುತ್ತಾ, 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ರೂಲ್ಸ್!
    • ಕುಡಿತ ಬಿಟ್ಟರು, ಹತ್ತಾರು ಶಾಲೆಗಳಿಗೆ ಬೆಳಕಾದರು: ಕುಶಲಕರ್ಮಿ ಸಮಾಜ ಸೇವಕ ಮಂಟೇಲಿಂಗಾಚಾರ್
    • ಅಂಗನವಾಡಿ ಕೇಂದ್ರದ ತಾಯಂದಿರಿಗೆ ಪೋಷಕತ್ವ ಯೋಜನೆಯ ಕುರಿತು ಮಾಹಿತಿ
    • ಸಂತಪೂರ ಮರಿಯ ಕೃಪಾ ದವಾಖಾನೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ
    • ಸತ್ವಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಉತ್ತಮ ಆರೋಗ್ಯ: ಹಾದನೂರು ಪ್ರಕಾಶ್ 
    • ಅಧಿಕಾರಿಗಳನ್ನು ಬೋನಿನಲ್ಲಿ ಕೂಡಿ ಹಾಕಿದ ಪ್ರಕರಣ: 15 ಮಂದಿ ಅಧಿಕಾರಿಗಳ ವಿರುದ್ಧವೂ ದೂರು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಳೆಹಾನಿ: ಪರಿಹಾರ ಬೇಕಾದರೆ, 60 ಸಾವಿರ ಲಂಚಕೊಡಬೇಕು | ಕೊತ್ತೇಗಾಲ ಗ್ರಾಮಸ್ಥರಿಂದ ಗಂಭೀರ ಆರೋಪ
    ಸ್ಪೆಷಲ್ ನ್ಯೂಸ್ December 15, 2021

    ಮಳೆಹಾನಿ: ಪರಿಹಾರ ಬೇಕಾದರೆ, 60 ಸಾವಿರ ಲಂಚಕೊಡಬೇಕು | ಕೊತ್ತೇಗಾಲ ಗ್ರಾಮಸ್ಥರಿಂದ ಗಂಭೀರ ಆರೋಪ

    By adminDecember 15, 2021No Comments2 Mins Read
    kottegala

    ಸರಗೂರು:  ಮಳೆಯಿಂದ ಹಾನಿಗೊಳಗಾದ ಮನೆ ದುರಸ್ತಿಗೆ ಪರಿಶೀಲನೆಗೆ ಬರುವ ಗ್ರಾಮ ಲೆಕ್ಕಿಗರು 60ರಿಂದ 80 ಸಾವಿರ ರೂಪಾಯಿ ಹಣ ಲಂಚ ನೀಡಬೇಕು ಎಂದು ಬೇಡಿಕೆಯಿಡುತ್ತಿದ್ದಾರೆ ಎಂದು ಆರೋಪಿಸಿ, ಕೊತ್ತೇಗಾಲ ಗ್ರಾಮಸ್ಥರು ತಾಲ್ಲೂಕು ಕಛೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

    ಈ ಸಂಬಂಧ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಚಲುವರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.


    Provided by
    Provided by
    Provided by

    ತಾಲ್ಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಉಂಟಾದ ಭಾರಿ ಮಳೆಯಿಂದಾಗಿ ಸಾಕಷ್ಟು ಮನೆಯ ಗೋಡೆಗಳು, ಮೇಲ್ಚಾವಣಿಗಳು ಕುಸಿದು ಹೋಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿತ್ತು. ಗ್ರಾಮಸ್ಥರು ಸಹ ಪ್ರವಾಹ ಪೀಡಿತ ಯೋಜನೆಯ ಅಡಿಯಲ್ಲಿ ಪರಿಹಾರವನ್ನು ನೀಡಿ ಮನೆಗಳ ದುರಸ್ತಿಗೆ ಸಹಕರಿಸುವಂತೆ ಕೋರಿ ಅರ್ಜಿಗಳನ್ನು ಸಹ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದರು.

    kottegala

    ಆ ಸಂಬಂಧ ಪರಿಶೀಲನೆಗೆ ಬಂದಿದ್ದ ಗ್ರಾಮ ಲೆಕ್ಕಿಗರು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವ ಸುಮಾರು 20 ಮನೆಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಅಲ್ಲದೇ ಕೆಲವರ ಬಳಿ ಹಣ ಪಡೆದು ಅವರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸಿದ್ದಾರೆ. ಉಳಿದ 20 ಮನೆಯ ಫಲಾನುಭವಿಗಳ ಹೆಸರನ್ನು ಸೇರಿಸಲು 60-80 ಸಾವಿರ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಬುಧವಾರ ಗ್ರಾಮಸ್ಥರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟಿಸಿ ದಂಡಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಆಗ್ರಹಿಸಿದರು.  ಪ್ರತಿಭಟನೆ ವೇಳೆ ಮಾತನಾಡಿದ ಗ್ರಾಮದ ಮುಖಂಡ ಬಸವಣ್ಣ, ನಮ್ಮ ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಯಾಗಿದ್ದ ಮನೆಗಳ ಪರಿಹಾರಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ ಪರಿಶೀಲನೆಗೆ ಬಂದ ಗ್ರಾಮ ಲೆಕ್ಕಿಗರು ಕೆಲವರ ಬಳಿ 70-80 ಸಾವಿರ ಹಣವನ್ನು ಪಡೆದು ಅವರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸಿದ್ದಾರೆ. ಆದರೆ ಬಡವರನ್ನು ಕೈ ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಮೊದಲು ಬಡವರಿಗೆ ಆದ್ಯತೆ ಕೊಡುವಂತಾಗಬೇಕು. ಈ ಬಗ್ಗೆ ತನಿಖೆ ನಡೆಸಿ ಬಡರಿಗೆ ಮನೆಗಳನ್ನು ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಕಳೆದ ಬಾರಿಯೂ ಸಹ ಈ ಬಗ್ಗೆ ತಹಸೀಲ್ದಾರ್ ರವರಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗದೆ ತನಿಖೆ ನಡೆಸುವಂತೆ ಆಗ್ರಹಿಸಿ ಈ ಬಾರಿ ಪ್ರತಿಭಟಿಸಿ ಇಂದು ತಹಸೀಲ್ದಾರ್‍ರವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇದು ಕೇವಲ ನಮ್ಮ ಗ್ರಾಮದ ಸಮಸ್ಯೆ ಮಾತ್ರವಲ್ಲ ಇದು ನಮ್ಮ ತಾಲ್ಲೂಕಿನ ಸಾಕಷ್ಟು ಗ್ರಾಮ ಪಂಚಾಯಿತಿಗಳ ಸಮಸ್ಯೆಯಾಗಿದೆ ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

    ಮನವಿಯನ್ನು ಸ್ವೀಕರಿಸಿ ಬಳಿಕ ಮಾತನಾಡಿದ ತಹಸೀಲ್ದಾರ್ ಚಲುವರಾಜು, ಈ ಮನವಿಯ ಕುರಿತಂತೆ ಕಾನೂನಾತ್ಮಕವಾಗಿ ತನಿಖೆ ನಡೆಸಲಾಗುವುದು. ಇದು ಯಾರಿಗೂ ಮನೆ ಹಂಚಿಕೆಯ ಯೋಜನೆಯಲ್ಲ ಬದಲಿಗೆ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸುವುದಾಗಿದೆ. ಅರ್ಜಿಗಳು ಬಂದ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ಮಾಡಿ ಹಾನಿಯ ಪ್ರಮಾಣವನ್ನು ನೋಡಿ ಅದಕ್ಕನುಗುವಾಗಿ ಪರಿಹಾರದ ಪಟ್ಟಿಗೆ ಸೇರಿಸಬೇಕು. ಆದರೆ ಇದರಲ್ಲಿ ಲೋಪವಾಗಿದೆ ಎಂದು ಕೊತ್ತೇಗಾಲ ಗ್ರಾಮದಿಂದ ಬಂದಿರುವ ದೂರಿನ ಅನ್ವಯ ಗ್ರಾಮ ಲೆಕ್ಕಿಗರಿಗೆ ನೋಟಿಸ್ ನೀಡಿ ಘಟನೆಯ ಕುರಿತಂತೆ ಅವರಿಂದ ಉತ್ತರ ಪಡೆದು ಬಳಿಕ ಕಾನೂನಿನ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಲೋಪ ಕಂಡುಬಂದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

    ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭ, ಗ್ರಾಮಸ್ಥರಾದ ರಾಮಚಂದ್ರ, ಆದಿರಾಜಪ್ಪ, ನಾಗಗೌಡ, ಬಿ.ನಾಗರರಾಜು, ಬಸವರಾಜು, ದೇವಮಣಿ, ನಾಗಮ್ಮ, ರತ್ನಮ್ಮ, ಶಿವಮ್ಮ, ಬೀರೇಗೌಡ, ಮಲ್ಲೇಗೌಡ, ಪ್ರಭುಸ್ವಾಮಿ, ಹರೀಶ, ಶಂಕರೇಗೌಡ, ಗಿರೀಶ್, ಶಿವು ಮುಂತಾದವರು ಹಾಜರಿದ್ದರು.

    ವರದಿ: ಚಂದ್ರಹಾದನೂರು

     

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿ: ಭಾರತದ ಪರ ನಿಂತ ಚೀನಾ!

    August 8, 2025

    ಅವಳ ತುಟಿ ಮಷಿನ್‌ ಗನ್‌: ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯ ಸೌಂದರ್ಯ ಹೊಗಳಿದ ಟ್ರಂಪ್!

    August 4, 2025

    ಸ್ನೇಹಿತನ ಮೃತದೇಹಕ್ಕೆ ಮದ್ಯ ಕುಡಿಸಿ, ಸಿಗರೇಟ್ ಬಾಯಲ್ಲಿಟ್ಟ ಸ್ನೇಹಿತ!

    April 5, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್ | ಬಾಲಕಿಯರ ಕುಸ್ತಿ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶೋಭಾ

    September 16, 2025

    ಬೀದರ್ : 2025–26ನೇ ಶೈಕ್ಷಣಿಕ ವರ್ಷದ ಪ್ರೌಢ ಶಾಲಾ ವಿಭಾಗದಲ್ಲಿ ಔರಾದ್ ನ ನಾಲಂದಾ ಪ್ರೌಢ ಶಾಲೆಯ 10ನೇ ತರಗತಿಯ…

    ದ್ವೇಷಭಾಷಣ: ಶಾಸಕ ಯತ್ನಾಳ್ ವಿರುದ್ಧ ತುಮಕೂರಿನಲ್ಲಿ ದೂರು ದಾಖಲು

    September 16, 2025

    ರಾಜ್ಯದಲ್ಲೂ ಜಾರಿಯಾಗುತ್ತಾ, 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ರೂಲ್ಸ್!

    September 16, 2025

    ಕುಡಿತ ಬಿಟ್ಟರು, ಹತ್ತಾರು ಶಾಲೆಗಳಿಗೆ ಬೆಳಕಾದರು: ಕುಶಲಕರ್ಮಿ ಸಮಾಜ ಸೇವಕ ಮಂಟೇಲಿಂಗಾಚಾರ್

    September 16, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.