ದಾವಣಗೆರೆ: ಕಾರು ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್‌ನ ಈಜುಕೊಳದ ಬಳಿಯಲ್ಲಿ ಗುರುವಾರ ನಡೆದಿದ್ದು, ಘಟನೆ ಸಂಬಂಧ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಜರಾತ್ ನ ಉಂಬೆರ್ ಗಾವ್ ನಿವಾಸಿ ವಾಸುದೇವಾ ಮೊದಾನಿ ಅವರ ಪುತ್ರಿ 25 ವರ್ಷ ವಯಸ್ಸಿನ ಪ್ರಿಯಾಂಕ ಮೊದಾನಿ ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪ್ರಿಯಾಂಕ ಗುರುವಾರ ಬೆಳಿಗ್ಗೆ ಎಂದಿನಿಂತೆ ವಸತಿನಿಲಯದಿಂದ ಕಾಲೇಜಿಗೆ ಹೊರಟಿದ್ದರು. ಪಿ.ಜಿ. ವಿದ್ಯಾರ್ಥಿ ವಿಷ್ಣು ಎಂಬುವರು ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದಿದೆ ಎಂದ ತಿಳಿದು ಬಂದಿದೆ.
ಪ್ರಿಯಾಂಕ ಹೆಲ್ಮೆಟ್ ಧರಿಸಿದ್ದರು. ಆದರೆ ಅದರ ಬೆಲ್ಟ್ ಅನ್ನು ಸಿಕ್ಕಿಸಿರಲಿಲ್ಲ. ಹಾಗಾಗಿ ಕಾರು ಡಿಕ್ಕಿಯಾದ ರಭಸಕ್ಕೆ ತಲೆಯಿಂದ ಹೆಲ್ಮೆಟ್ ಹಾರಿ ಹೋಗಿದೆ. ಹೀಗಾಗಿ ಅವರ ಪ್ರಾಣವೇ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇನ್ನೂ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿದಾಗ, ಈ ರಸ್ತೆಯಲ್ಲಿ ಯುವಕರು ವೇಗವಾಗಿ ಬೈಕ್, ಕಾರು ಚಲಾಯಿಸಿಕೊಂಡು ಬರುತ್ತಿದ್ದು, ಇಲ್ಲಿ ಹಂಪ್ಸ್ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700