ಭಾರತದ 527 ಆಹಾರ ಪದಾರ್ಥಗಳಲ್ಲಿಅಪಾಯಕಾರಿ ಕ್ಯಾನ್ಸರ್ ಕಾರಕ ಎಥಿಲೀನ್ ಆಕ್ಸೆಡ್ ಪತ್ತೆಯಾಗಿರುವುದಾಗಿ ಯುರೋಪಿಯನ್ ಒಕ್ಕೂಟದ ಆಹಾರ ಸುರಕ್ಷತಾ ಪ್ರಾಧಿಕಾರ ತಿಳಿಸಿದೆ. ಇತ್ತೀಚಿಗಷ್ಟೇ ಸಿಂಗಪುರ ಮತ್ತು ಹಾಂಗ್ ಕಾಂಗ್ ಮಾರುಕಟ್ಟೆಗಳಲ್ಲಿ ಭಾರತದ ಆಹಾರ ಪದಾರ್ಥಗಳನ್ನು ಇದೇ ಕಾರಣವೊಡ್ಡಿ ನಿಷೇಧಿಸಲಾಗಿತ್ತು.
ಸಂರಕ್ಷಿತ ಆಹಾರ ಪದಾರ್ಥಗಳಲ್ಲಿ ಇಥೈನಾಲ್ ಅಂಶವು ನಿಗದಿತ ಮಟ್ಟಕ್ಕಿಂತ ವಿಪರೀತ ಹೆಚ್ಚಾಗಿ ಬಳಕೆಯಾಗಿರುವುದರಿಂದ ಭಾರತ ಮೂಲದ ಆಹಾರ ಉತ್ಪಾದನಾ ಸಂಸ್ಥೆಗಳಿಗೆ ನಿರ್ಬಂಧದ ಆತಂಕ ಎದುರಾಗಿದೆ. ಈ ಹಿಂದೆ ಭಾರತದಿಂದ ರಫ್ತಾದ ಗಸಗಸೆ ಮತ್ತು ಒಣಹಣ್ಣು ಸಂಸ್ಕರಿತ ಬೀಜಗಳಲ್ಲಿ ವಿಷಕಾರಿ ಅಂಶ ರಾಸಾಯನಿಕಗಳು ಪತ್ತೆಯಾಗಿತ್ತು.
ಈ ಕುರಿತು ಭಾರತೀಯ ಆಹಾರ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಈ ಕೂಡಲೇ ತ್ವರಿತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಭಾರತದಿಂದ ರಫ್ತಾಗುವ ಆಹಾರ ಪದಾರ್ಥಗಳನ್ನು ಗಾಮಾ ರೇ ಟೀಟ್ ಮೆಂಟ್ ರೀತಿಯ ಅತ್ಯುನ್ನತ ವಿಧಾನಗಳಿಂದ ಶುದ್ದೀಕರಿಸಲಾಗುವುದು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296