ಯಾವ ದೊಣ್ಣೆ ನಾಯಕ ನೀನು. ನಿನ್ನ ಮನೆಯಿಂದ ದುಡ್ಡು ತಂದಿಯೇನಪ್ಪಾ. ಯಾವ ದೇಶದ ಮಹಾರಾಜ ನೀನು. ರಾಮ ಮಂದಿರ ಕಟ್ಟು, ಆದ್ರೆ ನಾನ್ ಕೇಳ್ತಿರೋದು ರಾಮ ರಾಜ್ಯ ಎಲ್ಲಿ ಅಂತ. ನಮ್ಮ ಮಕ್ಕಳಿಗೆ ಉದ್ಯೋಗ, ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಯಾಕಿಲ್ಲ ಒಳ್ಳೆಯ ಶಿಕ್ಷಣ. ನೀನು ನಿಜವಾಗಲೂ ಕೆಲಸ ಮಾಡಿದ್ರೆ ಇಷ್ಟು ದುಡ್ಡು ಖರ್ಚು ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಈಗ ಬರ ಪರಿಹಾರ ಘೋಷಿಸಿದೆ. ಡಿಸೆಂಬರ್‌ನಲ್ಲಿ ಬರ ಪರಿಹಾರ ಕೊಡಿ ಅಂದ್ರು ಯಾಕೆ ಕೊಡಲಿಲ್ಲ. ನಮ್ಮ 28 ಸಂಸದರು ಯಾಕೆ ಮಾತಾಡಲಿಲ್ಲ. ಹಲ್ಲು ಕಿಸಿದುಕೊಂಡು ನಿಂತಿದ್ರು ಎಂದು ಕಿಡಿಕಾರಿದ್ದಾರೆ.
ಮಹಾಪ್ರಭುಗಳು 2015ರಲ್ಲಿ ನೂರು ಸ್ಮಾರ್ಟ್ ಸಿಟಿ ಕೊಡ್ತೀನಿ ಅಂದ್ರಲ್ಲ. ಈಗ ಹತ್ತಾದ್ರು ಸ್ಮಾರ್ಟ್ ಸಿಟಿಯನ್ನ ತೋರಿಸಿ. ಯಾಕೆ ಸುಳ್ಳು ಹೇಳಿಕೊಂಡು ಓಡಾಡುತ್ತೀರಿ. ಈಗ ಮತ್ತೊಂದು ಗ್ಯಾರಂಟಿ ಹೇಳ್ತಿದ್ದೀರಿ. ಮೊದಲು ಕೊಟ್ಟ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ. ಈಗ ಮತ್ತೆ ಗ್ಯಾರಂಟಿ ಅಂತಿದ್ದೀರಲ್ಲ ಮಾತ್ ಮಾತಿಗೆ ದರ್ಶನ ಕೊಡೋದು, ರಾಜನ ಹಂಗೆ ಬರೋದು, ದಿನಕ್ಕೆ ಐದು ಡ್ರೆಸ್ ಹಾಕೋದೇ ಆಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296