ತಮಿಳುನಾಡು: ಪತ್ನಿಯನ್ನು ಫ್ಲೈಓವರ್ ಮೇಲೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.. ಆಕೆ ಪ್ರಜ್ಞೆ ತಪ್ಪಿದರೂ ಬಿಡದೇ ಹಲ್ಲೆ ಮಾಡಿದ್ದಾನೆ ಆ ದೃಶ್ಯಗಳನ್ನು ವಾಹನ ಸವಾರರು ಸೆರೆ ಹಿಡಿದಿದ್ದಾರೆ.ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ..
ಈ ಘಟನೆಯು ತಮಿಳುನಾಡಿನ ರಾಜಧಾನಿ ಚೆನ್ನೈ ನಗರದ ಕೊಯಂಬೆಡಿ ಬ್ರಿಡ್ಜ್ ಮೇಲೆ ಈ ಘಟನೆ ನಡೆದಿದೆ. ಆರೋಪಿಯನ್ನು ರೋಷನ್ ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಜಗಳವಾಡಿದ್ದಾನೆ ಇಷ್ಟಕ್ಕೆ ಸುಮ್ಮನಾಗದೆ ಗಂಡ ತನ್ನ ಹೆಂಡತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಫ್ಲೈಓವರ್ ಮೇಲೆ ಬಂದಿದ್ದಾನೆ.. ಬೈಕ್‌ನಲ್ಲಿ ಹೋಗುವಾಗಲೂ ಜಗಳ ಮುಂದುವರಿಸಿದ್ದಾನೆ. ಮತ್ತೆ ತನ್ನ ಹೆಂಡತಿಯನ್ನು ಫ್ಲೈಓವರ್ ಮೇಲೆ ತಂದು ಚೆನ್ನಾಗಿ ಥಳಿಸಿದ್ದಾನೆ.. ಆಕೆ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದರೂ ಬಿಡದೇ ಹೀನಾಯವಾಗಿ ಹೊಡೆದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತರ ಬೈಕ್ ಸವಾರರು ತಡೆಯಲು ಬಂದರೂ ಪ್ರಯೋಜನವಾಗಿಲ್ಲ.. ಕೊನೆಗೆ ಬೈಕ್ ಸವಾರನೊಬ್ಬ ಪೊಲೀಸರು ಬರುತ್ತಿದ್ದಾರೆ ಎಂದು ಬೆದರಿಸಿದ್ದಾನೆ.. ಆಗ ತನ್ನ ಹೆಂಡತಿಯನ್ನು ಮತ್ತೆ ಎಳೆದು ಬೈಕ್ ಮೇಲೆ ಕೂರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ..
ಪತ್ನಿಗೆ ಹಲ್ಲೆ ಮಾಡುವ ದೃಶ್ಯವನ್ನು ಬೈಕ್ ಸವಾರರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.. ಇದನ್ನಾಧರಿಸಿ ಪೊಲೀಸರು ಆರೋಪಿ ರೋಷನ್‌ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA