ಕಳೆದ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದ 11 ತಿಂಗಳಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಂಡ ಕಾರಣದಿಂದಾಗಿ ಭಾರತಕ್ಕೆ ಸುಮಾರು 790 ಕೋಟಿ ಡಾಲರ್ ತೈಲ ಆಮದು ಬಿಲ್ ಉಳಿತಾಯವಾಗಿದೆ.
2022-23ರಲ್ಲಿ ರಷ್ಯಾ ತೈಲದಿಂದಾಗಿ 510 ಶತಕೋಟಿ ಡಾಲರ್ ಉಳಿತಾಯವಾಗಿತ್ತು. ದೊಡ್ಡ ಪ್ರಮಾಣದ ರಿಯಾಯ್ತಿದರದಲ್ಲಿ ರಷ್ಯಾ ಕಚ್ಚಾ ತೈಲವನ್ನು ಭಾರತಕ್ಕೆ ಸರಬರಾಜು ಮಾಡುತ್ತಿದ್ದು ಈ ಅಂಶ ಐಸಿಆರ್ ಎ ಸಂಶೋಧನೆಯಿಂದ ತಿಳಿದು ಬಂದಿದೆ.
ಈ ಉಳಿತಾಯದಿಂದಾಗಿ ಭಾರತದ ಚಾಲ್ತಿ ಖಾತೆಯ ಜಿಡಿಪಿಗೆ ಹೋಲಿಸಿದರೆ ಕೊರತೆ ಅನುಪಾತ 2023-24ರಲ್ಲಿ 15-22 ಮೂಲ ಪಾಯಿಂಟ್ ಗೆ ಇಳಿದಿದೆ. ಕನಿಷ್ಟ ಮಟ್ಟದ ರಿಯಾಯ್ತಿ ಉಳಿದರೆ, ಸರಾಸರಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯರಲ್ಗೆ 85 ಡಾಲರ್ ಎಂದು ಅಂದಾಜಿಸಿದರೆ 2024-25ರಲ್ಲಿ ಭಾರತದ ನಿವ್ವಳ ತೈಲ ಆಮದು ಬಿಲ್ 101-104 ಡಾಲರ್ ಗೆ ಹೆಚ್ಚುವ ಸಾಧ್ಯತೆ ಇದ್ದು, 2023-24ರಲ್ಲಿ ಇದು 96 ಶತಕೋಟಿ ಡಾಲರ್ ಆಗಿತ್ತು ಎನ್ನಲಾಗಿದೆ.
ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳ ಆಧಾರದಲ್ಲಿ, 2023ರ ಏಪ್ರಿಲ್ ನಿಂದ 2024ರ ಫೆಬ್ರವರಿಯ ಅವಧಿಯಲ್ಲಿ ಭಾರತದ ಒಟ್ಟು ತೈಲ ಆಮದಿನ ಶೇಕಡ 36ರಷ್ಟನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. 2021-22ರಲ್ಲಿ ಇದ್ದ ಶೇಕಡ 2ಕ್ಕೆ ಹೋಲಿಸಿದರೆ ಇದು ಶೇಖಡ 1700ರಷ್ಟು ಅಧಿಕ ಎನ್ನಲಾಗಿದ್ದು, ಹೀಗಾಗಿ ಭಾರತಕ್ಕೆ ಭಾರೀ ಪ್ರಮಾಣದ ರಿಯಾಯಿತಿ ರಷ್ಯಾ ನೀಡಿದ್ದು, ಒಟ್ಟು ೭೯೦ ಡಾಲರ್ ಉಳಿತಾಯವಾಗಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA