ಬೆಂಗಳೂರು: ಇಷ್ಟು ದಿನ ಬಿರು ಬಿಸಿಲಿನಿಂದ ಹೈರಾಣಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಬಿಸಿಲಿನ ದಗೆಯಿಂದ ಬೇಸರಗೊಂಡಿದ್ದ ಜನರು ಸದ್ಯ ಮಳೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಗುಡುಗು ಸಿಡಿಲು ಸಹಿತ ರಾಜಧಾನಿಯಲ್ಲಿ ಮಳೆಯಾಗಿದೆ.
ಮೆಜೆಸ್ಟಿಕ್, ರಾಜಾಜಿನಗರ, ವಿಜಯನಗರ, ರೇಸ್ ಕೋರ್ಸ್, ಟೌನ್ ಹಾಲ್, ಬಸವನಗುಡಿ, ಜಯನಗರ, ರಾಜಾಜಿನಗರ ಸೇರಿದಂತೆ ಸುತ್ತಮುತ್ತ ಭಾರೀ ತುಂತುರು ಮಳೆಯಾಗುತ್ತಿದೆ. ನೆನ್ನೆ ಸಂಜೆ ಬೆಂಗಳೂರಿನ ಹಲವೆಡೆ ಮೋಡ ಕವಿದ ವಾತಾವರಣ ಇತ್ತು. ಹೀಗಾಗಿ ಸಿಲಿಕಾನ್ ಸಿಟಿ ಜನ ಮಳೆ ಬರುತ್ತದೆ ಎಂದು ನಿರೀಕ್ಷಿಸುತ್ತಿದ್ದರು.
ಇದೀಗ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ಬಳಿಕ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಇದಲ್ಲದೇ ಇಂದು ರಾತ್ರಿ ವೇಳೆಗೆ ಜೋರು ಮಳೆ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಇಷ್ಟು ದಿನ ಬಿಸಿಲಿನ ತಾಪದಿಂದ ಬಸವಳಿದ ಬೆಂಗಳೂರಿನ ಜನ ವರುಣನ ಆಗಮನದಿಂದ ಫುಲ್ ಖುಷ್ ಆಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


