ಪಿವೋಟಲ್ ಕಂಪನಿಯು ಮೊದಲ ಸಿಂಗಲ್ ಸೀಟರ್ ವಿಮಾನವನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಕುತೂಹಲದ ವಿಷಯ ಅಂದರೆ, ಈ ವಿಮಾನಕ್ಕೆ ಪೈಲಟ್ ಲೈಸನ್ಸ್ ಇಲ್ಲದಿದ್ದರೂ ಹಾರಾಟ ನಡೆಸಬಹುದು. ಅಲ್ಲದೇ, ಈ ವಿಮಾನ ಕೇವಲ 1.5 ಕೋಟಿ ರೂಪಾಯಿ ಮಾತ್ರ.
ಈ ಚಿಕ್ಕ ವಿಮಾನಕ್ಕೆ ಹೆಲಿಕ್ಸ್ ಎಂದು ಹೆಸರಿಡಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಹೆಚ್ಚು ದಟ್ಟಣೆಯ ಪ್ರದೇಶಗಳಲ್ಲಿ ಈ ವಿಮಾನ ಹಾರಾಟ ನಡೆಸಲ್ಲ. ೨೫೪ ಪೌಂಡ್ ಗಳಿಗಿಂತ ಕಡಿಮೆ ತೂಕವನ್ನು ಸಿಂಗಲ್ ಸೀಟರ್ ವಿಮಾನ ಹೊಂದಿದ್ದು, 20 ಮೈಲಿ ವ್ಯಾಪ್ತಿಯನ್ನು ಹೊಂದಿದೆ.
ಈ ವಿಮಾನವನ್ನು ಚಾಲನೆ ಮಾಡಲು ಪೈಲಟ್ ಪರವಾನಗಿ ಅಗತ್ಯವಿಲ್ಲ. ಆದರೆ, ಇದಕ್ಕೆ ತರಬೇತಿ ಕಡ್ಡಾಯವಾಗಿದೆ. ಸದ್ಯ ಈ ವಿಮಾನದ ಬೆಲೆ 1.5 ಕೋಟಿ ಎಂದು ಕಂಪನಿ ತಿಳಿಸಿದೆ. ಮಾಡೆಲ್ ಗಳ ಅನುಗುಣವಾಗಿ ದರ ಹೆಚ್ಚಾಗಲಿದೆ. ಪಿವೋಟಲ್ ವೆಬ್ ಸೈಟ್ ಮೂಲಕ ಈ ವಿಮಾನವನ್ನು ಬುಕ್ಕಿಂಗ್ ಮಾಡಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


