ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಗೆ ಬರುವ ಗಾಂಧಿ ಗ್ರಾಮದಲ್ಲಿ, ಕೆಲ ದಿನಗಳಿಂದ ನೆಪೆಡ್ ಮೂಲಕ ಕೊಬ್ಬರಿ ಖರೀದಿ ಮಾಡುವ ಕೇಂದ್ರಗಳನ್ನು ತೆರೆದಿದ್ದು, ಕೊಬ್ಬರಿ ಖರೀದಿಯಲ್ಲಿ ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗಳು ರೈತರ ಬಳಿ ಹಣ ವಸೂಲಿ ಮಾಡಲು ನಿಂತಿದ್ದಾರೆ ಎಂಬ ಮಾಹಿತಿಯನ್ನು, ನೊಂದ ರೈತನೊಬ್ಬ ಮಾಧ್ಯಮಕ್ಕೆ ದೂರವಾಣಿ ಮೂಲಕ ಕರೆ ಮಾಡಿ, ಆಗುತ್ತಿರುವ ಅನ್ಯಾಯವನ್ನು ಹಂಚಿಕೊಂಡಿದ್ದಾರೆ.
ಇನ್ನು ಹಣ ವಸೂಲಿ ಮಾಡುವ ದರೋಡೆಕೋರ ಅಧಿಕಾರಿಗಳ ವಿರುದ್ಧ, ಈಗಾಗಲೇ ಸ್ವರ್ಣ ಭೂಮಿ ರೈತ ಉತ್ಪಾದಕರ ಕಂಪನಿಯ ಉಪಾಧ್ಯಕ್ಷರಾದ ಕುಮಾರಸ್ವಾಮಿಯವರಿಗೆ, ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಹೀಗೆ ಮುಂದುವರೆದರೆ ದೊಡ್ಡ ಮಟ್ಟದ ಉಗ್ರ ಹೋರಾಟ ಮಾಡಲಾಗುವುದು ಎಂದು ಉಪಾಧ್ಯಕ್ಷರಾದ ಕುಮಾರಸ್ವಾಮಿಯವರು ಕೂಡ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಹಾಗಾದರೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಹಣ ವಸೂಲಿ ಮಾಡುತ್ತಿರುವ ಅಧಿಕಾರಿ ಮತ್ತು ಕೆಲ ಸಿಬ್ಬಂದಿಗಳ ವಿರುದ್ಧ ಯಾವ ರೀತಿ ಕಾನೂನು ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕಾಗಿದೆ.
ಬರಗಾಲದಲ್ಲೂ ಕೂಡ ರೈತರಿಂದ ಹಣ ವಸೂಲಿಗೆ ನಿಂತ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕೇಳುತ್ತಿರುವ ಹಣದ ವಿವರ ಹೇಗಿದೆ ಅಂದರೆ,
1) ಲಾರಿಗೆ ಕೊಬ್ಬರಿಯನ್ನು ತುಂಬಲು 5,000, ಕೊಡಬೇಕು. ಇಲ್ಲವಾದರೆ ನಿಮ್ಮ ಕೊಬ್ಬರಿಯನ್ನು ಲಾರಿಗೆ ತುಂಬುವುದಿಲ್ಲ ಎಂದು ರೈತರ ಬಳಿ ಹಣ ವಸೂಲಿ,
2) ರೈತರು ತಂದಂತಹ ಕೊಬ್ಬರಿ ಖರೀದಿ ಮಾಡುವಾಗ ಬಿಲ್ ಬರೆಯಲು 200 ರೂ ಹಣ ವಸೂಲಿ,
3) ಇನ್ನು ರೈತರು ತಂದಿರುವ ಕೊಬ್ಬರಿ ಚೀಲಗಳಲ್ಲಿ ಅಲ್ಲಿರುವ ಅಧಿಕಾರಿಗಳು ಪ್ರತಿಯೊಬ್ಬರೂ ಅವರ ಸ್ವಂತಕ್ಕೆ ಒಂದೊಂದು ಕೊಬ್ಬರಿ ಉಂಡೆ ತೆಗೆಯುವುದು,
4) ಇನ್ನು ಕೊಬ್ಬರಿ ಚೀಲವನ್ನು ಎತ್ತಿ ಹಾಕಲು ಒಂದು ಚೀಲಕ್ಕೆ 30 ರೂ ಹಣ ವಸೂಲಿ.
ಈ ರೀತಿ ರೈತರ ಬಳಿ ಹಣ ವಸೂಲಿ ಮಾಡುತ್ತಿರುವ ಆರೋಪವನ್ನು ನೇರವಾಗಿ ರೈತ ಮಾಧ್ಯಮಕ್ಕೆ ಕರೆ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಅಥವಾ ಅಧಿಕಾರಿಗಳೇ ಕೈಕಟ್ಟಿ ಕುಳಿತುಕೊಳ್ಳುತ್ತಾರಾ ಎಂಬುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.
ವರದಿ: ಸುರೇಶ್ ಬಾಬು ಎಂ ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


