ಭಾರತದ ಕೇಸರಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಏಕಾಏಕಿ ದರ ಏರಿಕೆಯಿಂದ ಎಲ್ಲರೂ ಅಚ್ಚರಿಗೊಂಡಿದ್ದಾರೆ. 1 ಕೆಜಿ ಭಾರತೀಯ ಕೇಸರಿ ಬೆಲೆ 4.95 ಲಕ್ಷ ರೂಪಾಯಿಗೆ ಏರಿದೆ. ಏತನ್ಮಧ್ಯೆ, ಭಾರತದ ಕೇಸರಿ ಬೆಲೆ ಏರಿಕೆಗೆ ನಿಖರವಾದ ಕಾರಣವೇನು? ಈ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿದೆ.
ಇರಾನ್ ನಿಂದ ಕೇಸರಿ ಪೂರೈಕೆಯಲ್ಲಿ ಭಾರಿ ಕುಸಿತ:
ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ, ಇರಾನ್ ನಿಂದ ಕೇಸರಿ ಪೂರೈಕೆಯು ತೀವ್ರವಾಗಿ ಕಡಿಮೆಯಾಗಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಸರಿ ಉತ್ಪಾದನೆಯಾಗುತ್ತದೆ. ಆದರೆ, ಈ ವರ್ಷವೂ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ.
ಭಾರತೀಯ ಕೇಸರಿ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಒಂದು ಪರಿಹಾರ:
ಸಿಕ್ಕಿರುವ ಮಾಹಿತಿಯಂತೆ, ಭಾರತದ ಕೆಲವು ಪ್ರಸಿದ್ಧ ಮಸಾಲೆ ಕಂಪನಿಗಳ ಮಸಾಲೆಗಳ ಮಾರಾಟವನ್ನು ಸಿಂಗಾಪುರ ಮತ್ತು ಹಾಂಕಾಂಗ್ ನಲ್ಲಿ ನಿಷೇಧಿಸಲಾಗಿದೆ. ಆದರೆ ಕೇಸರಿ ಭಾರತೀಯ ಮಸಾಲೆಯಾಗಿದ್ದು ಅದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಪ್ರಸ್ತುತ, ಕೇಸರಿ ಬೆಲೆ 4.95 ಲಕ್ಷ ರೂ ಆಗಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ, ಇರಾನ್‌ನಿಂದ ಕೇಸರಿ ಪೂರೈಕೆಯು ತೀವ್ರವಾಗಿ ಕಡಿಮೆಯಾಗಿದೆ. ಇದು ಭಾರತದ ಕೇಸರಿ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಸಮಾಧಾನ ತಂದಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಕೇಸರಿ ಬೆಲೆಯು ಸಗಟು ಮಾರುಕಟ್ಟೆಯಲ್ಲಿ ಶೇಕಡಾ 20 ರಷ್ಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇಕಡಾ 27 ರಷ್ಟು ಹೆಚ್ಚಾಗಿದೆ.
ಇರಾನ್ ನಲ್ಲಿ ಪ್ರತಿ ವರ್ಷ ಸುಮಾರು 430 ಟನ್ ಕೇಸರಿ ಉತ್ಪಾದನೆ:
ತಜ್ಞರ ಪ್ರಕಾರ ಉತ್ತಮ ಗುಣಮಟ್ಟದ ಭಾರತೀಯ ಕೇಸರಿ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 3.5 ರಿಂದ 3.6 ಲಕ್ಷ ರೂಪಾಯಿ ಇದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಮೊದಲು, ಕೇಸರಿ ಬೆಲೆ 3 ಲಕ್ಷ ರೂಪಾಯಿಗಳವರೆಗೆ ಇತ್ತು. ಆದರೆ ಈಗ ಅದರಲ್ಲಿ ಭಾರೀ ಏರಿಕೆಯಾಗಿದೆ. ಕೇಸರಿ 4.95 ಲಕ್ಷ ರೂ.ಗೆ ಏರಿದೆ. ಇರಾನ್‌ನಲ್ಲಿ ಪ್ರತಿ ವರ್ಷ ದೊಡ್ಡ ಪ್ರಮಾಣದ ಕೇಸರಿ ಉತ್ಪಾದನೆಯಾಗುತ್ತದೆ. ಇರಾನ್ ಪ್ರತಿ ವರ್ಷ ಸುಮಾರು 430 ಟನ್ ಕೇಸರಿ ಉತ್ಪಾದಿಸುತ್ತದೆ. ಇದು ವಿಶ್ವದ ಉತ್ಪಾದನೆಯ 90 ಪ್ರತಿಶತವಾಗಿದೆ. ಈ ಕೇಸರಿ ತನ್ನ ವಿಶೇಷ ರುಚಿಗೆ ಹೆಸರುವಾಸಿಯಾಗಿದೆ. ಕೇಸರಿಯನ್ನು ಆಹಾರ, ಔಷಧ ಮತ್ತು ವಿವಿಧ ರೀತಿಯ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ.
ಭಾರತದ ಕೇಸರಿ ಬೆಲೆ ಏಕೆ ಹೆಚ್ಚುತ್ತಿದೆ?
ಸದ್ಯದ ಜಾಗತಿಕ ಪರಿಸ್ಥಿತಿಯಿಂದಾಗಿ ಇರಾನ್ ನ ಕೇಸರಿ ವಿಶ್ವ ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಈ ಕಾರಣದಿಂದಾಗಿ, ಭಾರತೀಯ ಕೇಸರಿ ಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತ ಕೂಡ ಇರಾನ್ ನಿಂದ ಕೇಸರಿ ಆಮದು ಮಾಡಿಕೊಳ್ಳುತ್ತದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಪ್ರಾರಂಭದ ನಂತರ ಇದು ಸಹ ಕಡಿಮೆಯಾಗಿದೆ. ಇದರಿಂದ ದರ ನಿರಂತರವಾಗಿ ಏರಿಕೆಯಾಗುತ್ತಿರುವ ಚಿತ್ರಣ ಕಂಡು ಬರುತ್ತಿದೆ. ಕಾಶ್ಮೀರ ಕೇಸರಿಯನ್ನು ಅತ್ಯುತ್ತಮ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಭಾರತವು ಯುಎಇ, ಯುಎಸ್ ಎ, ಆಸ್ಟ್ರೇಲಿಯಾ, ನೇಪಾಳ ಮತ್ತು ಕೆನಡಾಕ್ಕೆ ಕೇಸರಿ ಪೂರೈಸುತ್ತದೆ. ಒಂದು ಗ್ರಾಂ ಕೇಸರಿ ಹೂವಿನಿಂದ 160 ರಿಂದ 180 ನಾರುಗಳು ಸಿಗುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296