ಬೆಂಗಳೂರು: ಟ್ರೋಲರ್ಸ್ ಮೇಲೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಕೆಂಗಣ್ಣು ಬೀರಿದ್ದು, ತಮ್ಮನ್ನು ಟ್ರೋಲ್ ಮಾಡಿದವರಿಗೆ ಹಿಡಿಶಾಪ ಹಾಕಿದ್ದಾರೆ.
ಈ ಉಪಯೋಗ ಇಲ್ಲದ ಇರುವ ಕೆಲವರು ಟ್ರೋಲ್ ಮಾಡುತ್ತಾರೆ. ಕೆಟ್ಟ ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡುವುದು. ಟ್ರೋಲ್ ಮಾಡುವವರು ನಿಮ್ಮ ಜೀವಮಾನದಲ್ಲಿ ಉದ್ಧಾರಾಗಲ್ಲ. ಇನ್ಮೇಲಿಂದ ನಿಮಗೆ ನಮ್ಮ ಶಾಪ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧುಬಂಗಾರಪ್ಪನವರ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಧುಬಂಗಾರಪ್ಪ, ನಿಮ್ಮ ನರೇಂದ್ರ ಮೋದಿ ಅವರಿಗೆ ಕನ್ನಡ ಬರುತ್ತಾ? ಇಲ್ಲಿ ಬಂದು ಕನ್ನಡ ಮಾತಾಡ್ತಾರೆ, ತಮಿಳುನಾಡಿಗೆ ಹೋಗಿ ತಮಿಳಲ್ಲಿ ಮಾತಾಡ್ತಾರೆ. ಯಾರೋ ಬರೆದು ಕೊಟ್ಟಿದ್ದನ್ನು ಹೇಳ್ತಾರೆ, ಅದನ್ನು ಮೊದಲು ತಿಳಿದುಕೊಳ್ಳಿ. ನನ್ನ ಕನ್ನಡವನ್ನು ಟ್ರೋಲ್ ಮಾಡುವುದರಿಂದ ನಿಮ್ಮ ಹೊಟ್ಟೆ ಏನು ತುಂಬಲ್ಲ ಎಂದಿದ್ದಾರೆ.
ನನಗೆ ಕನ್ನಡ ಓದೋದು ಸ್ವಲ್ಪ ಕಷ್ಟ. ಆದರೆ, ಮಾತಾಡುವಾಗ ಕನ್ನಡ ಚೆನ್ನಾಗಿಯೇ ಮಾತಾಡ್ತೀನಿ. ಈಗ ಏನಾದ್ರೂ ತಡವರಿಸುತ್ತಿದ್ದೇನಾ? ಟ್ರೋಲ್ ಮಾಡೋರಿಗೆ ಬೇರೆ ಕೆಲಸ ಇಲ್ಲ. ಅವರಿಗೆ ಶಾಪ ಹಾಕ್ತೀನಿ ಅಂದಿದ್ದೆ, ಅನಿವಾರ್ಯವಾಗಿ ಅದನ್ನು ಮತ್ತೆ ಹೇಳಬೇಕಾಗುತ್ತದೆ ಎಂದು ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾರಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


