ಸರಗೂರು: ರಾಜ್ಯದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ್ ಪ್ರಸಾದ್ ರವರು, ಬದುಕಿನ ಹೆಚ್ಚುಕಾಲ ರಾಜಕೀಯದಲ್ಲಿಯೇ ಕಳೆದರು. ಅವರು ನಡೆಸಿದ ಹೋರಾಟಗಳು ದಲಿತರಿಗೆ ಹಾಗೂ ಶೋಷಿತ ಸಮುದಾಯಗಳಿಗೆ ಆಶಾಕಿರಣವಾಗಿತ್ತು. ಶ್ರೀನಿವಾಸ್ ಪ್ರಸಾದ್ ಅವರು ನೇರನುಡಿಗೆ ಹೆಸರಾದವರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲ್ಲೂಕಿನ ಪಟ್ಟಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವನದಲ್ಲಿ ಭಾನುವಾರದಂದು ಕೋಟೆ ಮತ್ತು ಸರಗೂರು ಆದಿಕರ್ನಾಟಕ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ, ಸ್ವಾಭಿಮಾನಿ ಸಂಸದರಾದ ವಿ. ಶ್ರೀನಿವಾಸಪ್ರಸಾದ್ ರವರ ನುಡಿ ನಮನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು.
ಸ್ವಾಭಿಮಾನಿ ಚಕ್ರವರ್ತಿ ವಿ. ಶ್ರೀನಿವಾಸಪ್ರಸಾದ್ ರವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬಹುದು ಎಂದರು.
ಬದುಕಿನ ಕೊನೆಯ ಪಯಣವೇ ಸಾವು. ಹಾಗಾಗಿ ಸಾವಿಗೂ ಅವರು ಮಾಡಿದ ಎಲ್ಲಾ ಸಮುದಾಯ ಕಾರ್ಯಕ್ರಮಗಳು ನಿಲುವು ಬದ್ಧತೆ ಅವರನ್ನು ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದೆ ಎಂದು ಹೇಳಿದರು.
ನಗರ ಪಾಲಿಕೆ ಮಾಜಿ ಮಹಾಪೌರರು ಪುರುಷೋತ್ತಮ್ ಮಾತನಾಡಿ, 50 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. 1987 ರಿಂದ ಅನೇಕ ಜನಪರ ಹಾಗೂ ದಲಿತರ ಮತ್ತು ಎಲ್ಲಾ ಸಮುದಾಯದ ಜೊತೆ ಕೆಲಸ ಮಾಡಿಕೊಂಡು ಬಂದರು. ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರೂ ಪ್ರಸಾದ್ ರವರು ಗಳಿಸಿದ ಹೆಸರನ್ನು ನಾವುಗಳು ಗಳಿಸಲು ಸಾಧ್ಯವಿಲ್ಲ ಎಂದರು.
ರಾಜ್ಯಾದ್ಯಂತ ಶೋಷಿತ ಸಮುದಾಯವನ್ನು ಒಂದುಗೂಡಿಸುವ ಕೆಲಸ ಮಾಡಿದರು. ಅವರ ನಾಯಕತ್ವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟರು. ಅವರ ಶಕ್ತಿ ಪ್ರಬಲವಾದ ಅಂಬೇಡ್ಕರ್ ವಾದವೇ ಆಗಿತ್ತು. ಅವರ ಧ್ವನಿಯಾಗಲು ಎತ್ತರಕ್ಕೆ ಬೆಳೆಯಲು ಇಲ್ಲಿನ ಜನರೇ ಕಾರಣ ಎಂದು ಸ್ಮರಿಸಿದರು. ಪ್ರಸಾದ್ ಒಬ್ಬ ಜನಪರ ಹಾಗೂ ಸಮುದಾಯ ನಾಯಕರಾಗಿದ್ದರು. ಕೊನೆಯ ದಿನಗಳಲ್ಲಿ ಒಪ್ಪಂದ ಸಿದ್ಧಾಂತದ ಜತೆಗೆ ರಾಜಕೀಯ ಮಾಡಬೇಕಾದ ಅನಿವಾರ್ಯತೆ ಅವರಿಗೆ ಒದಗಿ ಬಂತು. ನಾನು ಪಕ್ಷಾಂತರಿಯಾಗಿದ್ದೇನೆ. ಆದರೆ ತತ್ವಾಂತರಿಯಲ್ಲ ಎಂದಿದ್ದರು. ಅವರೊಬ್ಬ ಸಮಾಜವಾದಿ ಸ್ವಾಭಿಮಾನಿ ಪ್ರಜಾಪ್ರಭುತ್ವವಾದಿಯಾಗಿ ಬದುಕಿದವರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗೌತಮಿ ಬಂತೇಜಿ, ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ನಿವೃತ್ತ ಪ್ರಾಧ್ಯಾಪಕ ತಳವಾರ್ ಮಾತನಾಡಿದರು
ಆದಿಕರ್ನಾಟಕ ಮಹಾಸಭಾ ಕೋಟೆ ಮತ್ತು ಸರಗೂರು ತಾಲ್ಲೂಕಿನ ಅಧ್ಯಕ್ಷರು ಪುರಸಭೆ ಸದಸ್ಯ ಮತ್ತು ಎಚ್.ಸಿ. ನರಸಿಂಹಮೂರ್ತಿ ಸರಗೂರು ಶಿವಣ್ಣ, ಶ್ರೀನಿವಾಸಪ್ರಸಾದ್ ತಮ್ಮನ ಮಗ ಭರತ್, ಆದಿಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷರು ಮುದ್ದುಮಲ್ಲಯ್ಯ, ಮಲಾರ ಪುಟ್ಟಯ್ಯ, ಸೋಗಳಿ ಶಿವಣ್ಣ, ಜಿಪಂ ಮಾಜಿ ಸದಸ್ಯರು ಪಿ. ರವಿ, ಚಿಕ್ಕವೀರನಾಯಕ, ಭಾಗ್ಯಲಕ್ಷ್ಮಿ, ವೆಂಕಟಸ್ವಾಮಿ, ಮೈ ಮುಲ್ ನಿರ್ದೇಶಕ ಈರೇಗೌಡ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮಾಜಿ ಅಧ್ಯಕ್ಷ ಎಂ ಡಿ ಮಂಜಯ್ಯ, ನಾಯಕ ಸಮಾಜ ಅಧ್ಯಕ್ಷ ದೊಡ್ಡನಾಯಕ, ಶಂಭುಲಿಂಗನಾಯಕ, ಹಿರಿಯ ಮುಖಂಡರು ಚಾ ನಂಜುಂಡ ಮೂರ್ತಿ, ಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ವರ್ತಕರ ಸಂಘದ ಮಂಡಳಿ ಅಧ್ಯಕ್ಷ ಶ್ರೀನಿವಾಸ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ಧರಾಜು, ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಸರಗೂರು ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ದಸಂಸ ಸಂಘಟನೆ ಸಂಚಾಲಕರು ಸಣ್ಣಕುಮಾರ್, ಇಟ್ನ ರಾಜಣ್ಣ, ಕೂಡಗಿ ಗೊವಿಂದರಾಜು, ಗ್ರಾಮೀಣ ಮಹೇಶ್, ಚನ್ನಿಪುರ ಮಲ್ಲೇಶ್, ಬೆಟ್ಟಸ್ವಾಮಿ, ನಾಗರಾಜು, ಹಾದನೂರು ಪುಟ್ಟಸ್ವಾಮಿ, ರಾಜೇಶ್, ಹೈರಿಗೆ ಶಿವರಾಜು, ಜಿಪಂ ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು, ಸದಸ್ಯರು ಮತ್ತು ವಿವಿಧ ಗ್ರಾಮಗಳಿಂದ ಗ್ರಾಮಸ್ಥರು ಹಾಗೂ ಮುಖಂಡರು ಮತ್ತು ಯಜಮಾನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


