ಟೆಹ್ರಾನ್: ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಜರ್ ಬೈಜಾನ್ ನ ಗಡಿಗೆ ಭೇಟಿ ನೀಡಿ ಹಿಂದಿರುಗುವ ಮಾರ್ಗದಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ದಟ್ಟ ಮಂಜಿನಿಂದಾಗಿ ಪತನವಾಗಿತ್ತು.
ಕಡಿದಾದ ಪರ್ವತ ಶ್ರೇಣಿಯ ಕಣಿವೆ ಭಾಗದಲ್ಲಿ ಪ್ರತಿಕೂಲ ವಾತಾವರಣದ ನಡುವೆ ಹಲವು ಗಂಟೆಗಳ ಶೋಧ ಕಾರ್ಯದ ಬಳಿಕ ಡ್ರೋನ್ ಮೂಲಕ ಪತನಗೊಂಡ ಹೆಲಿಕಾಪ್ಟರ್ ಅವಶೇಷ ಪತ್ತೆ ಮಾಡಲಾಗಿತ್ತು. ಹೆಲಿಕಾಪ್ಟರ್ ಸುಟ್ಟು ಭಸ್ಮವಾಗಿದೆ ಎಂದು ಅಧಿಕಾರಿ ತಿಳಿಸಿದ್ದರು.
ಹೆಲಿಕಾಪ್ಟರ್ ಅಪಘಾತದ ನಂತರ ಶೋಧ ಕಾರ್ಯಾಚರಣೆಯಲ್ಲಿ ಇಂದು ಮೃತದೇಹಗಳನ್ನು ಸಾಗಿಸುತ್ತಿರುವ ತುಣುಕನ್ನು ಅಲ್ಲಿನ ಸುದ್ದಿ ಸಂಸ್ಥೆಯೊಂದು ಬಿಡುಗಡೆ ಮಾಡಿದೆ.
ಸೋಮವಾರ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ ಶೋಧ ತಂಡಗಳು ಅವಶೇಷಗಳನ್ನು ಪತ್ತೆ ಮಾಡಿದ ನಂತರ ರೈಸಿ ಮತ್ತು ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿ ತಿಳಿಸಿದ್ದಾರೆ. ಇರಾನ್ ನ ಸುದ್ದಿ ಸಂಸ್ಥೆಯು ರೈಸಿ ಹಾಗೂ ಇತರರ ಸಾವುಗಳನ್ನು ದೃಢಪಡಿಸಿದೆ. ಇರಾನ್ ಅಧ್ಯಕ್ಷ ಮತ್ತು ವಿದೇಶಾಂಗ ಸಚಿವರನ್ನು ಹೊತ್ತ ಹೆಲಿಕಾಪ್ಟರ್ ನ ಎಲ್ಲಾ ಪ್ರಯಾಣಿಕರು ಹುತಾತ್ಮರಾಗಿದ್ದಾರೆ ಎಂದು ವರದಿ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296