ಸಾಮಾನ್ಯವಾಗಿ ಸೆಕೆ ಆದಾಗ ಅಮೆರಿಕನ್ ಡಾಲರ್ ನೋಟಿನಲ್ಲಿ ಹಣೆ ಒರೆಸಿಕೊಳ್ಳುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಹಾಗೂ ಇನ್ನಿತರ ಆಟಗಾರರ ಜೊತೆ ಇರುವಾಗ ಹೀಗೆ ವರ್ತಿಸಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವಾಗ ಆಜಂ ಖಾನ್ ಸಂವೇದನಾ ರಹಿತವಾಗಿ ವರ್ತಿಸಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಯುವ ಬ್ಯಾಟರ್ ಆಜಂ ಖಾನ್ ಇದರಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಏನಾಗುತ್ತಿದೆ ಎಂದು ಬಾಬರ್ ಕೇಳಿದ್ದಾರೆ. ಇದಕ್ಕೆ ಉತ್ತರಿಸುವ ಆಜಂ ಭಾರಿ ಸೆಕೆ ಇದೆ ಎಂದು ಹೇಳುತ್ತಾ ನೋಟಿನಿಂದ ಹಣೆ ಒರೆಸಿಕೊಳ್ಳುತ್ತಿರುವುದು ಕಂಡುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296