ತುಮಕೂರು: ಕಾಂಗ್ರೆಸ್ ಪಕ್ಷಕ್ಕೆ ಆತಂಕ ಶುರುವಾಗಿದ್ದು, ಹೇಗಾದರೂ ಮಾಡಿ ಈ ಬಾರಿಯಾದ್ರೂ ನಾರಾಯಣ ಸ್ವಾಮಿರನ್ನ ಸೋಲಿಸಬೇಕೆಂದು, ನಾಲ್ವರು ನಾರಾಯಣ ಸ್ವಾಮಿಯನ್ನ ಕಣಕ್ಕೆ ಇಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಆಗ್ನೇಯ ಶಿಕ್ಷಕರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾರಾಯಣ ಸ್ವಾಮಿ ಅವರನ್ನು ಕುತಂತ್ರದಿಂದ ಸೋಲಿಸಲು ಕಾಂಗ್ರೆಸ್ ನಾಲ್ವರು ನಾರಾಯಣ ಸ್ವಾಮಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ನೀವು(ಮತದಾರರು) ನಾರಾಯಣಸ್ವಾಮಿ ಅವರ ಕೈ ಹಿಡಿಯುವ ವಿಶ್ವಾಸ ಇದೆ. ಅಧಿಕಾರದ ಬಲದಿಂದ ನಾವು ಗೆಲ್ಲಬಹುದು ಅಂತಾ ಅವರು ತಿಳಿದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಅವರು ಗೆಲ್ಲೋದರಿಂದ ಸದನದ ಪಾವಿತ್ರಕ್ಕೆ ಧಕ್ಕೆ ಬರವುದು ನಿಶ್ಚಿತ. ಜೆಡಿಎಸ್ ಬಿಜೆಪಿ ಇದ್ದಾಗ ಶಿಕ್ಷಣಕ್ಕೆ ಏನ್ ಮಾಡಿತ್ತು. ಕೋವಿಡ್ ಬಂದಾಗ ಬಿಜೆಪಿ ಸರ್ಕಾರ ಶಿಕ್ಷಕರಿಗೆ ಸಂಬಳವನ್ನ ಕಟ್ ಮಾಡದೇ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದರು.
ಇಡೀ ದೇಶದಲ್ಲೇ ಸಂಬಳ ಕಟ್ ಮಾಡಿದ್ರೆ ಯಡಿಯೂರಪ್ಪ ಮಾತ್ರ ಕಟ್ ಮಾಡದೆ ಸಂಬಳ ನೀಡಿದ್ದರು. ನಮ್ಮ ಸರ್ಕಾರ ಇದ್ದಾಗ ಅನೇಕ ಪ್ರೌಢ ಶಾಲೆಗಳು, ಪಾಲಿಟೆಕ್ನಿಕ್ ಶಾಲೆಗಳು ತೆರೆದಿದ್ದು, ಶಿಕ್ಷಣಕ್ಕೆ ಅತಿಹೆಚ್ಚು ಒತ್ತು ಕೊಟ್ಟಿದ್ದು ಬಿಜೆಪಿ ಎಂದರು.
ಶಿಕ್ಷಕರಿಗೆ ನ್ಯಾಯ ಕೊಟ್ಟಿದ್ದು ನಮ್ಮ ಸರ್ಕಾರ ಇದ್ದಾಗ. ಶಿಕ್ಷಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದು ಬಿಜೆಪಿ. ಶಿಕ್ಷಣ ಕ್ಷೇತ್ರ ಕಾಂಗ್ರೆಸ್ ಸರ್ಕಾರ ಕಲುಷಿತ ಮಾಡುವ ಕೆಲಸ ಮಾಡ್ತಿದೆ ಎಂದರು.
ಎನ್ ಇಪಿ ಜಾರಿತಂದು ಯುವಕರಿಗೆ ಶಕ್ತಿ ನೀಡೋ ಕೆಲಸ ಮಾಡಿದ್ರೆ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ದಾವಣಗೆರೆಯಲ್ಲಿ ಓರ್ವ ಶಿಕ್ಷಕರು ಹೇಳಿದ್ರು ಈಗಿನ ಶಿಕ್ಷಣ ಸಚಿವರನ್ನ ಮೊದಲು ದಯವಿಟ್ಟು ಬದಲಾವಣೆ ಮಾಡಿಸಿ ಅಂತ ಎಂದರು.
ಬೇಜವಾಬ್ದಾರಿ ಸಚಿವರು ಸಿಕ್ಕಿದ್ದು ಬೇಸರದ ಸಂಗತಿ. ವೈ.ಎ. ನಾರಾಯಣ ಸ್ವಾಮಿಗೆ ಮತ ನೀಡಿ ಬಿಜೆಪಿ ಗೆಲ್ಲಿಸಿ. ಮೊದಲ ಪ್ರಾಶಸ್ತ್ಯ ಮತ ನೀಡಿ ನಾರಾಯಣಸ್ವಾಮಿ ಗೆಲ್ಲಿಸಿ ಎಂದು ಬಿ.ವೈ.ವಿಜಯೇಂದ್ರ ಮನವಿ ಮಾಡಿಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA