ಕೊರಟಗೆರೆ: ಗ್ರಾಮದ ಗೌಡರ ವೈಯಕ್ತಿಕ ವಿಷಯಕ್ಕೆ ದೇವಾಲಯಕ್ಕೆ ಬೀಗ ಹಾಕಿದ್ದು, ಇದೀಗ ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರತಿ ವರ್ಷ ಮಾಡುವ ಗ್ರಾಮ ದೇವರ ಜಾತ್ರೆ ನಿಲ್ಲಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದು, ಗ್ರಾಮದ ನೂರಾರು ಮಹಿಳೆಯರಿಂದ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಮಾಡಿರುವ ಘಟನೆ ನಡೆದಿದೆ.
ಜಾತ್ರೆ ಮಾಡದೆ ನಿಲ್ಲಿಸಿರುವುದರಿಂದ ಗ್ರಾಮದಲ್ಲಿ ಸುಮಾರು 20 ಸಾವುಗಳು ಸಂಭವಿಸಿವೆ. ಹಾಗಾಗಿ ಶ್ರೀ ಆಂಜನೇಯ ದೇವರ ಜಾತ್ರೆಯಾಗಲೇಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿರುವ ಘಟನೆ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚುನಾವಣೆಯ ಫಲಿತಾಂಶ ಹತ್ತಿರವಿರುವ ಕಾರಣ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೆಲಸಗಳ ಒತ್ತಡವಿರುತ್ತದೆ. ಆದ ಕಾರಣ ಚುನಾವಣೆ ಫಲಿತಾಂಶ ಮುಗಿದ ನಂತರ ಜಾತ್ರೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿರುವ ಕೇಸ್ ವಾಪಸ್ ತೆಗೆದುಕೊಂಡು ಜಾತ್ರೆಯನ್ನು ಮಾಡಿಕೊಳ್ಳಿ. ಆಗ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಹಶೀಲ್ದಾರ್ ಮಂಜುನಾಥ್ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ ಎನ್ ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


