ತುಮಕೂರಿನಲ್ಲಿ ಹುಚ್ಚುನಾಯಿ ಹಾವಳಿ ಹೆಚ್ಚಾಗಿದ್ದು 5ಕ್ಕೂ ಹೆಚ್ಚು ಮಂದಿ ಮೇಲೆ ದಾಳಿ ಮಾಡಿವೆ. ಓರ್ವ ಬಾಲಕಿಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರು ನಗರದ ಗೋಕುಲ ಬಡಾವಣೆಯಲ್ಲಿ ನಡೆದಿದೆ.
ಸಂಜೆ 5ಗಂಟೆ ಸುಮಾರಿಗೆ ಗೋಕುಲ ಬಡಾವಣೆಯಲ್ಲಿ ಕಾಣಿಸಿಕೊಂಡ ಹುಚ್ಚುನಾಯಿ, ಮನೆ ಮುಂದೆ ಆಟವಾಡುತ್ತಿದ್ದ 9 ವರ್ಷ ಬಾಲಕಿ ಮೇಲೆ ದಾಳಿ ಮಾಡಿದೆ. ಬಾಲಕಿಯ ಕೈ, ಕಾಲಿಗೆ ಗಂಭೀರವಾಗಿ ಕಚ್ಚಿರುವ ಹುಚ್ಚುನಾಯಿ, ಅದಲ್ಲದೇ ಮನೆಯಲ್ಲಿ ಸಾಕಿದ್ದ ಎರಡು ನಾಯಿಗಳ ಮೇಲೆಯೂ ದಾಳಿ ಮಾಡಿದೆ.
ಹೊರಗಡೆಯಿಂದ ಬರ್ತಿರುವ ನಾಯಿಗಳ ಹಾವಳಿಯಿಂದ ಸ್ಥಳೀಯರಲ್ಲಿ ಹೆಚ್ಚಿದ ಆತಂಕ ಹೆಚ್ಚಾಗಿದೆ. ರಿಂಗ್ ರಸ್ತೆ ಸಮೀಪ ಇರುವ ಹಿನ್ನೆಲೆ, ಬೇರೆ ಕಡೆಯಿಂದ ರಿಂಗ್ ರಸ್ತೆ ಬಳಿ ನಾಯಿಗಳನ್ನ ತಂದು ಬಿಟ್ಟು ಹೋಗುತ್ತಿರುವ ಆರೋಪ ವ್ಯಕ್ತವಾಗಿದೆ.
ಸ್ಥಳೀಯರ ಮೇಲೆ ದಾಳಿ ನಡೆಸಿ ನಾಯಿಗಳು ಆತಂಕ ಸೃಷ್ಟಿಸಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಿಂದ ಒತ್ತಾಯ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ತುಮಕೂರು ಮಹಾನಗರ ಪಾಲಕೆ ಕಮಿಷನರ್ ಬಿ.ವಿ. ಅಶ್ವಿಜಾ ಗಂಭೀರ ಗಾಯಗೊಂಡಿದ್ದ ಬಾಲಕಿಯ ಆರೋಗ್ಯ ವಿಚಾರಿಸಿದರು. ಪಾಲಿಕೆ ವತಿಯಿಂದ ಪರಿಹಾರ ಕೊಡಿಸೋದಾಗಿ ಭರವಸೆ ನೀಡಿದರು.
ದಾಳಿ ನಡೆಸಿದ್ದ ಹುಚ್ಚುನಾಯಿಯನ್ನ ಸ್ಥಳೀಯರು ಕೊಂದು ಹಾಕಿದ್ದಾರೆ. ಸಾವನ್ನಪ್ಪಿದ ಹುಚ್ಚುನಾಯಿಯನ್ನ ಪ್ರಯೋಗಾಲಯಕ್ಕೆ ಕೊಂಡೊಯ್ದು ವೆಟರ್ನರಿ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA