40 ವರ್ಷದ ತಾಯಿ ತನ್ನ ಮೂವರು ಗಂಡು ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನೊಂದಿಗೆ ಪ್ರೀತಿಸಿ ಓಡಿ ಹೋದ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ವರದಿಯಾಗಿದೆ.
ಸರ್ಕಾರಿ ನೌಕರನಾಗಿದ್ದ ಗಂಡನ ಅಕಾಲಿಕ ನಿಧನದಿಂದ ಅನುಕಂಪದ ಮೇಲೆ ಸಿಕ್ಕ ಸರ್ಕಾರಿ ನೌಕರಿ ಮಾಡಿಕೊಂಡು ಬದುಕು ನಡೆಸುತ್ತಿದ್ದ ಮಹಿಳೆಗೆ 10, 15, 19 ವರ್ಷ ವಯಸ್ಸಿನ ಗಂಡು ಮಕ್ಕಳಿದ್ದಾರೆ. ಆದರೆ, 25 ವಯಸ್ಸಿನ ಯುವಕನೊಂದಿಗೆ ಪ್ರೀತಿಸಿ ಮನೆ ಬಿಟ್ಟು ಮಕ್ಕಳನ್ನು ಅನಾಥ ಮಾಡಿ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಮಕ್ಕಳು ನ್ಯಾಯಕ್ಕಾಗಿ ತಾಯಿ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಡಿಗೆ ಮನೆಯಲ್ಲಿದ್ದ ಈ ಮಕ್ಕಳಿಗೆ ಬಾಡಿಗೆ ಹಣ ಕಟ್ಟಲು ಆಗದೇ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


