ಹೂವಿನ ಹೆಸರು ಮತ್ತು ಹಣ್ಣಿನ ಹೆಸರಿನಲ್ಲಿರುವ ಈ ಮೂನ್ ತುಂಬಾ ಸ್ಪೆಷಲ್ ಅಂತೆ. ಹೌದು, ಜೂನ್ 21ಕ್ಕೆ ಆಗಸದಲ್ಲಿ ಪೂರ್ಣ ಚಂದಿರ ಕಾಣಿಸಲಿದ್ದು, ಬಣ್ಣದಲ್ಲೂ ಎಲ್ಲರನ್ನೂ ಆಕರ್ಷಿಸಲಿದೆ. ಮುಖ್ಯವಾಗಿ ರೋಸ್ ಮೂನ್ ಅಥವಾ ಸ್ಟ್ರಾಬೆರಿಮೂನ್ ಸಾಮಾನ್ಯಕ್ಕಿಂತ ತುಸು ಹೆಚ್ಚಾದ ಹಳದಿ ಮಿಶ್ರಿತ ಚಿನ್ನದ ಬಣ್ಣದಲ್ಲಿ ಕಂಗೊಳಿಸಲಿದೆ.
ಇನ್ನು ಈ ಚಂದ್ರನಿಗೆ ಹಣ್ಣಿನ ಹೆಸರು ಬರಲು ಕಾರಣ ಏನೆಂದರೆ ಉತ್ತರ ಅಮೆರಿಕದಲ್ಲಿ ಸ್ಟ್ರಾಬೆರಿ ಮೂನ್ ಗೋಚರಿಸಿದ ಬಳಿಕ ಸ್ಟ್ರಾಬೆರಿ ಹಣ್ಣಿನ ಬೆಳೆ ಬೆಳೆಯಲು ಆರಂಭಿಸುತ್ತಾರೆ ಎಂದು ಹೇಳಲಾಗಿದೆ.
ಅಲ್ಲದೇ ಜೂನ್ ತಿಂಗಳಲ್ಲಿ ಅಂತಿಮ ವಾರದಲ್ಲಿ ಮಳೆ ಹೆಚ್ಚಾಗಲಿದ್ದು, ಕೃಷಿ ಚಟುವಟಿಕೆಗಳು ಹೆಚ್ಚಾಗಿರುತ್ತದೆ. ಬಿತ್ತನೆ ಮಾಡುವುದು ಮುಂತಾದ ಬೆಳೆ ಬೆಳೆಯುವುದು. ಇದೇ ವೇಳೆ ಗುಲಾಬಿ ಹೂವುಗಳು ಹೆಚ್ಚಾಗಿ ಹೂವು ಬಿಡುತ್ತದೆ. ಹೀಗಾಗಿ ರೋಸ್ ಮೂನ್ (Rose Moon) ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ವಿಶೇಷ ಅಂದ್ರೆ ಉತ್ತರ ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ಸ್ಟ್ರಾಬೆರಿ ಮೂನ್ ಬಳಿಕ ಮದುವೆಗಳು ಹೆಚ್ಚಾಗಿ ನಡೆಯುತ್ತದೆಯಂತೆ. ಮದುವೆ ಬಳಿಕ ನವ ಜೋಡಿ ಹನಿಮೂನ್ ಗೆ ತೆರಳುತ್ತಾರೆ. ಈ ಚಂದ್ರನನ್ನು ನೋಡಿದಾಗ ನವಜೋಡಿಗಳಿಗೆ ರೊಮ್ಯಾಂಟಿಕ್ ಫೀಲ್ ಬರುತ್ತೆ. ಅದಕ್ಕಾಗಿ ಇಲ್ಲಿ ಈ ಚಂದ್ರನನ್ನು ಹನಿಮೂನ್ಎಂದು ಕೂಡ ಕರೆಯಲಾಗುತ್ತದೆ.
ಒಟ್ಟಿನಲ್ಲಿ ಅಮೆರಿಕ ಖಗೋಳ ವಿಜ್ಞಾನಿ ಜ್ಯಾಕಿ ಪ್ರಕಾರ, ಆಯಾ ಭಾಗದಲ್ಲಿ ಅಲ್ಲಿನ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳಿಗೆ ಅನುಗುಣವಾಗಿ ಸ್ಟ್ರಾಬೆರಿ ಮೂನ್‌ಗೆ ಹಲವು ಹೆಸರುಗಳಾದ ಸ್ಟ್ರಾಬೆರಿ ಮೂನ್, ಹಾಟ್ ಮೂನ್ , ಹನಿಮೂನ್, ರೋಸ್ ಮೂನ್ ಎಂದೂ ಕರೆಯುತ್ತಾರೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA