ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಿತು. ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳಲಾಯಿತು. ತೆರಿಗೆ ಪಾವತಿಸುವವರಿಗೆ ಅನೇಕ ಸಕಾರಾತ್ಮಕ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ.
ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ಜಿಎಸ್ಟಿ ಮಂಡಳಿಯಲ್ಲಿ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ಸಭೆಯಲ್ಲಿ ಕೆಲವು ವಸ್ತುಗಳ ಮೇಲಿನ ಜಿಎಸ್ಟಿಯನ್ನ ಕಡಿಮೆ ಮಾಡಲಾಗಿದೆ. ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಗಳು, ಕಾಯುವಿಕೆ, ಲಾಕರ್ ಕೊಠಡಿಗಳು, ಬ್ಯಾಟರಿ ಚಾಲಿತ ಸೇವೆಗಳು ಮತ್ತು ಅಂತರ್ ರೈಲ್ವೆ ಸೇವೆಗಳ ಮೇಲಿನ ಜಿಎಸ್ಟಿಯನ್ನ ಮನ್ನಾ ಮಾಡಲಾಗಿದೆ. ಇದಲ್ಲದೆ, ಹಾಲಿನ ಕ್ಯಾನ್ ಗಳು ಮತ್ತು ಕಾರ್ಟನ್ ಬಾಕ್ಸ್ ಗಳ ಮೇಲಿನ ಜಿಎಸ್ಟಿಯನ್ನ ಶೇಕಡಾ 18 ರಿಂದ 12ಕ್ಕೆ ಇಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೌರ ಕುಕ್ಕರ್ ಗಳ ಮೇಲಿನ ಜಿಎಸ್ ಟಿಯನ್ನ ಶೇ.18ರಿಂದ ಶೇ.12ಕ್ಕೆ ಇಳಿಸಲಾಗಿದೆ. ಇದಲ್ಲದೆ, ಶಿಕ್ಷಣ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರದ ಹಾಸ್ಟೆಲ್ಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗುವುದು. ತಿಂಗಳಿಗೆ 20,000 ರೂ.ಗಿಂತ ಕಡಿಮೆ ಶುಲ್ಕ ಹೊಂದಿರುವ ಹಾಸ್ಟೆಲ್’ಗಳಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ.
ಜಿಎಸ್ಟಿಯ ಸೆಕ್ಷನ್ 73ರ ಅಡಿಯಲ್ಲಿ ಬೇಡಿಕೆ ನೋಟಿಸ್ ನೀಡಲಾಗಿದೆ. ಮಾರ್ಚ್ ವೇಳೆಗೆ ತೆರಿಗೆ ಪಾವತಿಸುವವರಿಗೂ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದರು. ಜಿಎಸ್ಟಿ ಕುರಿತು ನ್ಯಾಯಮಂಡಳಿಗಳು ಮತ್ತು ನ್ಯಾಯಾಲಯಗಳಿಗೆ ಹೋಗುವ ವಹಿವಾಟಿನ ಸಮಯವನ್ನ ಹೆಚ್ಚಿಸಲಾಗಿದೆ ಎಂದು ಅವ್ರು ಹೇಳಿದರು. ಪ್ರಸ್ತುತ ದಂಡದ ಮೇಲೆ ವಿಧಿಸಲಾಗುವ ಬಡ್ಡಿಯನ್ನ ಮನ್ನಾ ಮಾಡುವ ಪ್ರಸ್ತಾಪಗಳಿವೆ. ಆದಾಗ್ಯೂ, ಜಿಎಸ್ಟಿ ಕೌನ್ಸಿಲ್ ಸಿಜಿಎಸ್ಟಿ ಕಾಯ್ದೆಗೆ ಹಲವಾರು ತಿದ್ದುಪಡಿಗಳನ್ನ ಪ್ರಸ್ತಾಪಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA