ದೂರಸಂಪರ್ಕ ಕಾಯ್ದೆ-2023ರ ಅಡಿಯಲ್ಲಿ ನಿರ್ಮಿಸಿದ ಕೆಲ ನಿಯಮಾವಳಿಗಳನ್ನು ಜೂನ್ 26ರಿಂದ ಜಾರಿಗೆ ತರಲಾಗುತ್ತದೆ. ಈ ಸಂಬಂಧ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಭಾರತೀಯ ಟೆಲಿಗ್ರಾಫ್ ಕಾಯ್ದೆ–1885, ವೈರ್‍ಲೆಸ್ ಟೆಲಿಗ್ರಫಿ ಕಾಯ್ದೆ-1993 ಮತ್ತು ಟೆಲಿಗ್ರಾಫ್ ವೈರ್ಸ್ (ಕಾನೂನುಬಾಹಿರ ಸ್ವಾಧೀನ) ಕಾಯ್ದೆ–1950ರ ಆಧಾರದಲ್ಲಿ ರಚಿಸಿದ್ದ ದೂರಸಂಪರ್ಕ ವಲಯದ ನಿಬಂಧನಾ ಚೌಕಟ್ಟಿನ ಬದಲು ಹೊಸ ನಿಯಮಾವಳಿ ಜಾರಿಗೆ ಬರಲಿದೆ.
ದೂರಸಂಪರ್ಕ ಕಾಯ್ದೆ–2023ರ ಸೆಕ್ಷನ್ 1,2, 10ರಿಂದ 30, 42ರಿಂದ 44, 46, 47, 50 ರಿಂದ 58, 61 ಮತ್ತು 62 ಜೂನ್ 26ರಂದು ಜಾರಿಗೆ ಬರಲಿದೆ ಎಂದು ಅಧಿಸೂಚನೆ ಹೇಳಿದೆ.
ಈ ನಿಯಮಾವಳಿಗಳ ಅಡಿಯಲ್ಲಿ ಸರ್ಕಾರ ಯಾವುದೇ ಅಥವಾ ಎಲ್ಲ ದೂರಸಂಪರ್ಕ ಸೇವೆಗಳು ಅಥವಾ ನೆಟ್ ವರ್ಕ್‍ಗಳನ್ನು ಹಾಗೂ ಪೈಲಟ್ ಪ್ರಾಜೆಕ್ಟ್ ಗಳನ್ನು ರಾಷ್ಟ್ರೀಯ ಭದ್ರತೆ, ವಿದೇಶಗಳ ಜತೆಗಿನ ಸ್ನೇಹಸಂಬಂಧ ಅಥವಾ ಯುದ್ಧ ಕಾಲದಲ್ಲಿ ನಿಯಂತ್ರಿಸುವ ಅಥವಾ ನಿರ್ವಹಣೆಯನ್ನು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA