ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆ ಅರೆಬೆತ್ತಲಾಗಿ ಸುಮಾರು 1.5 ಕಿ.ಮೀ. ಓಡಿ ತನ್ನ ಪ್ರಾಣ ಉಳಿಸಿಕೊಂಡ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಬಳಿ ನಡೆದಿದ್ದು, ನಾಗರಿಕ ಸಮಾಜ ಬೆಚ್ಚಿಬಿದ್ದಿದೆ.
ಮಹಿಳೆ ಅರೆನಗ್ನವಾಗಿ ಓಡಿಬರುತ್ತಿರುವುದನ್ನು ನೋಡಿದ ಸಾರ್ವಜನಿಕರು ಪನ್ವಾಸ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಪೊಲೀಸರು ಮಹಿಳೆಯನ್ನು ರಕ್ಷಿಸಿ, ವಿಚಾರಣೆ ಮಾಡಿದಾಗ ನಡೆದ ವಿಷಯವನ್ನು ಹೇಳಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಬಲ್ಪುರ ಮತ್ತು ಮಾಂಡ್ಲಾದ ಇಬ್ಬರು ಪ್ರೇಮಿಗಳು ಉಜ್ಜಯಿನಿಗೆ ಓಡಿಬಂದಿದ್ದರು. ಆದ್ರೆ ಉಳಿಯಲು ಮನೆ ಹಾಗೂ ಮಾಡೋಕೆ ಕೆಲಸ ಇರಲಿಲ್ಲ. ಇಬ್ಬರೂ ಕೆಲಸ ಹುಡುತ್ತಿದ್ದಾಗ ರವಿ ಎಂಬ ಹುಡುಗನ ಪರಿಚಯವಾಗಿದೆ.. ಆತ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ತಾಜ್ ಪುರಕ್ಕೆ ಕರೆದೊಯ್ದಿದ್ದಾನೆ. ಬಳಿಕ ಅಲ್ಲಿ ಗುಡಿಸಲೊಂದರಲ್ಲಿ ಇಬ್ಬರನ್ನೂ ಇರುವಂತೆ ಸೂಚನೆ ನೀಡಿದ್ದರು.
ನಂತರ ಮಹಿಳೆಯ ಪ್ರಿಯಕರನನ್ನು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ಹೊರಗೆ ಕಳುಹಿಸಿದ್ದು, ಇದೇ ವೇಳೆ ಆರೋಪಿ ರವಿ ತನ್ನ ಇನ್ನೊಬ್ಬ ಸ್ನೇಹಿತ ಇಮ್ರಾನ್ ಎಂಬಾತನನ್ನು ಗುಡಿಸಲಿಗೆ ಕರೆಸಿಕೊಂಡಿದ್ದಾನೆ. ಇಬ್ಬರೂ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.. ಈ ವೇಳೆ ಏನೇನೋ ಮಾಡಿ ಮಹಿಳೆ ತಪ್ಪಿಸಿಕೊಂಡು ಅರೆನಗ್ನ ಸ್ಥಿತಿಯಲ್ಲೇ ಓಡಿಬಂದಿದ್ದಾಳೆ ಎಂದು ತಿಳಿದುಬಂದಿದೆ. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಈಕೆಯ ಸಹಾಯಕ್ಕೆ ಬಂದಿದ್ದಾರೆ. ಘಟನೆ ಸಂಬಂಧ ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


