ಹದಿನೇಳು ವರ್ಷದ ಪರ್ವೀನಾ ಎಂಬ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ ಈಕೆಯ ತಾಯಿ ಅನೀತಾ ಬೇಗಂಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..
ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಾಲಕಿಯ ತಾಯಿಯನ್ನು ಬಂಧಿಸಲಾಗಿದೆ..
ಘಟನೆಯ ವಿವರ: ಅನೀತಾ ಬೇಗಂನ ಗಂಡ ತಾಹೀರ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಾರೆ. ತಾಹೀರ್ ಪತ್ನಿ ಹಾಗೂ ಮಗಳು ಫರೀದಾಬಾದ್‌ನಲ್ಲಿ ವಾಸಿಸುತ್ತಿದ್ದರು.ಗಂಡ ಯಾವಾಗಲೂ ಕರೆ ಮಾಡಿ ಇಬ್ಬರನ್ನೂ ಮಾತನಾಡಿಸುತ್ತಿದ್ದ.ಆದ್ರೆ ಕೆಲ ದಿನಗಳಿಂದ ಪತ್ನಿ ಮಾತ್ರ ಮಾತನಾಡುತ್ತಿದ್ದಳು. ಮಗಳ ಬಗ್ಗೆ ಕೇಳಿದರೆ ಏನೇನೋ ಸಬೂಬು ಹೇಳುತ್ತಿದ್ದಳು.ಇದರಿಂದ ಅನುಮಾನಗೊಂಡ ತಾಹೀರ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಪೊಲೀಸರು ಮನೆಗೆ ಹೋಗಿ ವಿಚಾರಣೆ ಮಾಡಿದಾಗ ಮಗಳು ಪರ್ವೀನಾ ಅಲ್ಲಿ ಇರಲಿಲ್ಲ. ಅನುಮಾನಗೊಂಡ ಪೋಲಿಸರು ಬಾಲಕಿಯ ತಾಯಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮನೆಯಲ್ಲೇ ಮಗಳನ್ನು ಹೂತುಹಾಕಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.
ನಾನು ಮಗಳನ್ನು ಕೊಲೆ ಮಾಡಿಲ್ಲ. ಮಗಳು ಪರ್ವೀನಾ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದೆವು. ರಾತ್ರಿ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಇದರಿಂದಾಗಿ ದಿಕ್ಕು ತೋಚದೆ ಇಬ್ಬರ ಸಹಾಯದಿಂದ ಮಗಳ ಮೃತದೇಹವನ್ನು ಮನೆಯಲ್ಲೇ ಸಮಾಧಿ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.
ಆದ್ರೆ ಕೊಲೆ ಮಾಡಿಯೇ ಹೂತು ಹಾಕಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.ಈ ಬಗ್ಗೆ ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA