ಭಾರತದಲ್ಲಿ ಸಣ್ಣ ಹಾಗೂ ದೊಡ್ಡ ರೈಲ್ವೆ ಸ್ಟೇಷನ್ ಗಳನ್ನು ಹಿಡಿದು ಒಟ್ಟು 8,300 ಕ್ಕೂ ಅಧಿಕ ಸ್ಟೇಷನ್ ಗಳಿವೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ಹಲವಾರು ದೊಡ್ಡ ಹಾಗೂ ಚಿಕ್ಕ ರೈಲು ನಿಲ್ದಾಣಗಳು ಬರುತ್ತವೆ, ನೀವು ನೋಡಿರಬಹುದು ದೊಡ್ಡ ರೈಲು ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ನ ರೈಲ್ವೆ ಟ್ರ್ಯಾಕ್ ಗಳನ್ನು ಕಾಂಕ್ರೀಟ್ ಮಾಡಲಾಗಿರುತ್ತದೆ, ಆದರೆ ಸಣ್ಣ ಪುಟ್ಟ ರೈಲು ನಿಲ್ದಾಣಗಳ ಬಳಿ ಇರುವ ರೈಲು ಹಳಿಗಳಿಗೆ ಕಾಂಕ್ರೀಟ್ ಮಾಡಿರುವುದಿಲ್ಲ, ಬದಲಾಗಿ ಕಲ್ಲುಗಳನ್ನು ಸುರಿಯಲಾಗಿರುತ್ತದೆ.
ರೈಲು ಕಂಬಿಗಳ ನಡುವೆ ಕಲ್ಲುಗಳನ್ನು ಏಕೆ ಹಾಕಲಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ, ಈ ರೀತಿ ಕಲ್ಲುಗಳನ್ನು ಸುರಿದಿರುವುದನ್ನು ಬೈಲೆಸ್ಟ್ (Ballast On Track) ಅಥವಾ ನಿಲುಭಾರ ಎಂದು ಕರೆಯಲಾಗುತ್ತದೆ. ರೈಲು ಅತ್ಯಂತ ವೇಗವಾಗಿ ರೈಲು ಹಳಿಗಳ ಮೇಲೆ ಬರುವಾಗ ಕಂಬಿಗಳ ಕಂಪನ ಹಾಗೂ ಶಬ್ದವಿರುತ್ತದೆ, ಈ ರೀತಿ ಕಲ್ಲುಗಳನ್ನು ಹಳಿಗಳ ಮಧ್ಯದಲ್ಲಿ ಹಾಕುವದರಿಂದ ಕಂಪನ ಹಾಗೂ ಶಬ್ದವನ್ನು ಕಡಿಮೆಯಾಗುತ್ತದೆ.
ಟ್ರ್ಯಾಕ್ ಗಳ ಕೆಳಗೆ ಸಾಕಷ್ಟು ಚಿಕ್ಕ ಕಲ್ಲುಗಳನ್ನು ಸುರಿಯಲಾಗಿರುತ್ತದೆ. ಕಂಬಿಗಳ ಕಂಪನ ಹಾಗೂ ಶಬ್ದವನ್ನು ಈ ಕಲ್ಲುಗಳು ಹೀರಿಕೊಂಡು ಕಂಪನ ಮತ್ತು ಶಬ್ಧವನ್ನು ತಡೆಯುತ್ತವೆ. ಹಾಗೆಯೇ ಹಳಿಗಳ ಕೆಳಗಿನ ಪಟ್ಟಿಗಳು ಅಂದರೆ ಸ್ಲೀಪರ್ಸ್ ಎಂದು ಕರೆಯಲಾಗುವ ಪಟ್ಟಿಗಳನ್ನು ಅಲ್ಲಿಂದ ಕದಲದಂತೆ ಈ ಕಲ್ಲುಗಳು ನೋಡಿಕೊಳ್ಳುತ್ತವೆ. ಇವೆರಡೂ ಕಾರಣಕ್ಕಾಗಿ ಹಾಗೆ ಚಿಕ್ಕ ಕಲ್ಲುಗಳನ್ನು ಹಾಕಲಾಗಿರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA