ಬೀದರ್: ಪ್ರತ್ಯೇಕ ಪ್ರಕರಣಗಳಲ್ಲಿ ಬೀದರ್ ಜಿಲ್ಲಾ ಪೊಲೀಸರು 12 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಪೌಷ್ಠಿಕ ಆಹಾರ, ವಾಹನ ಹಾಗೂ ಪಡಿತರ ಸಾಗಾಟ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ, ಭಾಲ್ಕಿ ನಗರದ ನ್ಯೂ ಮಾಸುಮಪಾಷಾ ಕಾಲೋನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿಯನ್ನು ಭಾಲ್ಕಿ ನಗರ ಪೊಲೀಸ್ ಠಾಣೆಯ ರಾಜಕುಮಾರ, ಪಿ.ಎಸ್.ಐ, ಸಿಬ್ಬಂದಿ ವಿಕ್ರಮ, ನಿಂಗಣ್ಣಾ, ದಿಲೀಪ, ರಾಜೇಂದ್ರಕುಮಾರ, ಆಹಾರ ನಿರೀಕ್ಷಕರು ಭಾಲ್ಕಿ ಇವರ ಸಮಕ್ಷಮ ದಾಳಿ ಮಾಡಿ 13,600 ರೂಪಾಯಿ ಮೌಲ್ಯದ 4 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಯಿತು.
ಅಸ್ಟೂರ ರಿಂಗ್ ರೋಡ್ ಹತ್ತಿರ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ವಾಹನದ ಮೇಲೆ ಬೀದರ ನಗರ ಪೊಲೀಸ್ ಠಾಣೆ ಪಿ.ಎಸ್.ಐ ಪ್ರಭಾಕರ ಪಾಟೀಲ್, ಪಿ.ಎಸ್.ಐ ಸಿಬ್ಬಂದಿ ರಮೇಶ, ಗುರುನಾಥ, ಅರುಣಕುಮಾರ, ಆಹಾರ ನಿರೀಕ್ಷಕರು, ಬೀದರ್ ಇವರ ಸಮಕ್ಷಮದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ 26 ಕ್ವಿಂಟಾಲ್ ಅಕ್ಕಿ, ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಯಿತು.
ಕಮಠಾಣಾ ಈದಗಾ ಹತ್ತಿರ ವಾಹನದಲ್ಲಿ ಸಾಗಿಸುತ್ತಿದ್ದ 9 ಕ್ವಿಂಟಾಲ್ ಅಕ್ಕಿ ಹಾಗೂ ಒಂದು ಗುಡ್ಸ್ ವಾಹನವನ್ನು ಬೀದರ್ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ ವಿಜಯಕುಮಾರ ರವರು ತಮ್ಮ ಸಿಬ್ಬಂದಿ ಮಾಣೀಕ, ಸಿದ್ರಾಮ್ , ಅರುಣಕುಮಾರ, ಆಹಾರ ನಿರೀಕ್ಷಕರು ಬೀದರ್ ಇವರ ಸಮಕ್ಷಮದಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡರು.
ಧನ್ನೂರ ಪೊಲೀಸ್ ಠಾಣೆಯ ಪಿ.ಎಸ್.ಐ ವೀರಶೇಟ್ಟಿ ಪಾಟೀಲ್ ರವರು ತಮ್ಮ ಸಿಬ್ಬಂದಿ ಬಕ್ಕಯ್ಯಾ, ಹರ್ಷವರ್ಧನ್, ರಾಜೇಂದ್ರಕುಮಾರ, ಆಹಾರ ನಿರೀಕ್ಷಕರು ಭಾಲ್ಕಿ ರವರ ಸಮಕ್ಷಮದಲ್ಲಿ ದಾಳಿ ನಡೆಸಿ ಮಾಸಿಮಾಡ ಗ್ರಾಮದಲ್ಲಿ ಸಂಗ್ರಹಿಸಿಟ್ಟ 21 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡರು.
ಕುಶನೂರ ಪೊಲೀಸ್ ಠಾಣೆಯ ಪಿ.ಎಸ್.ಐ. ಲಕ್ಷ್ಮಣ ತಮ್ಮ ಸಿಬ್ಬಂದಿ ಶಿವಾನಂದ ಎಮ್. ಪಾಟೀಲ್, ಆಹಾರ ನಿರೀಕ್ಷಕರು ಕಮಲನಗರ ಇವರ ಸಮಕ್ಷಮ ದಾಳಿ ಮಾಡಿ 14 ಕ್ವಿಂಟಾಲ್ 80 ಕೆ.ಜಿ ಅಕ್ಕಿ, ಮತ್ತು ಒಂದು ಗುಡ್ಸ್ ವಾಹನ ವಶಕ್ಕೆ ಪಡೆದುಕೊಂಡರು.
ಗಾಂಧಿಗಂಜ ಪೊಲೀಸ್ ಠಾಣೆಯ “ರೌಢಿ ನಿಗೃಹ ದಳ” ಸೊಮೇಶ್ವರ, ಪಿ.ಎಸ್.ಐ ಅವರ ತಂಡದ ರಾಜಕುಮಾರ, ಇಸ್ಮಾಯಿಲ್ , ಅಲ್ಕಾ, ಅಂಗನವಾಡಿಗಳ ಬೀದರ ಲೋಕಲ್ ವಲಯ–2 ರ ಮೇಲ್ವಿಚಾರಣೆ, ಬೀದರ್ ಇವರ ಸಮಕ್ಷಮ ಗಾಂಧಿಗಂಜ ಡಿ.ಸಿ.ಸಿ ಬ್ಯಾಂಕ್ ಹತ್ತಿರ ಅಂಗನವಾಡಿ ಮಕ್ಕಳಿಗೆ ಕ್ಷಿರ ಭಾಗ್ಯ ಯೋಜನೆಯಡಿ ವಿತರಿಸಲಾದ ಪೌಷ್ಠಿಕ ಆಹಾರಗಳಾದ ನಂದಿನ ಹಾಲಿನ ಪೌಡರ್, ರವಾ, ಸಾಂಬಾರ್ ಮಸಾಲಾ, ಪುಷ್ಠಿ ಪೌಡರ್, ಬೆಲ್ಲಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 12,78,424 ರೂಪಾಯಿಗಳಾಗಿವೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


