ಬಿಹಾರ: ದೈಹಿಕ ಸಂಪರ್ಕ ಓಕೆ, ಈ ಮದುವೆ ಎಲ್ಲ ಯಾಕೆ ಎಂದು ಕೇಳಿದ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ಟಾಯ್ಲೆಟ್ ಗೆ ಹಾಕಿ ಫ್ಲಶ್ ಮಾಡಿದ ಘಟನೆಯೊಂದು ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.
ಪಾಟ್ನಾದ ಮಧೌರದ 12ನೇ ವಾರ್ಡ್ನ ಕೌನ್ಸಿಲರ್ ವೇದ ಪ್ರಕಾಶ್ ನರ್ಸಿಂಗ್ ಹೋಮ್ ಮಾಲಕಿ ಜೊತೆ ಪ್ರೀತಿಯಲ್ಲಿದ್ದ. ಆಕೆಯ ಹಿಂದೆ ಬಿದ್ದು ಆಕೆಗೆ ತನ್ನ ಪ್ರೀತಿ ನಿವೇದನೆ ಮಾಡಿ ನಂತರ ಆಕೆ ಒಪ್ಪಿಗೆ ಕೊಟ್ಟು, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿಗೆ ಬಂದಿದ್ದಾರೆ.
ಪ್ರೀತಿ, ಲೈಂಗಿಕ ಸಂಪರ್ಕ ಸುದೀರ್ಘ ವರ್ಷಗಳಿಂದ ಮುಂದುವರಿದಿದೆ. ಹೀಗಿರುವಾಗ ಗೆಳತಿ ಮದುವೆಯಾಗಬೇಕು ಎಂದು ಬೇಡಿಕೆಯಿಟ್ಟಿದ್ದಳು. ಆಕೆಯ ಒತ್ತಾಯದ ಸಹಿಸಲಾಗದೇ ಮದುವೆಗೆ ವೇದ ಪ್ರಕಾಶ್ ಒಪ್ಪಿಗೆ ನೀಡಿದ್ದಾನೆ.
ಮದುವೆ ದಿನಾಂಕ ಫಿಕ್ಸ್ ಆಗಿದೆ. ಎಲ್ಲಾ ತಯಾರಿ ಮಾಡಲಾಗಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಮದುವೆ ದಿನಾಂಕ ಹತ್ತಿರ ಬರುತ್ತಿದ್ದಂತೆ ನಾನು ಮದುವೆಯಾಗಲ್ಲ ಎಂದು ಹೇಳಿದ್ದಾನೆ. ಹೀಗೇ ಇರೋಣ, ಮದುವೆ ಯಾಕೆ ಎಂದು ಪ್ರಶ್ನೆ ಮಾಡೋಕೆ ಶುರು ಮಾಡಿದ್ದಾನೆ.
ಗೆಳತಿ ತನ್ನ ಬಾಯ್‌ಫ್ರೆಂಡ್ನ ಮನವೊಲಿಸಲು ಹಲವು ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಮಾತ್ರ ಮದುವೆ ಯಾಕೆ? ಹೀಗೆ ಇದ್ದರೆ ಒಳ್ಳೆಯದು ಎನ್ನುತ್ತಲೇ ತನ್ನ ತಗಾದೆ ತೆಗೆದಿದ್ದಾನೆ. ಇತ್ತ ಮದುವೆ ಮೆಹಂದಿ ದಿನ ಫೋನ್ ಮಾಡಿದ ವೇದಪ್ರಕಾಶ್ ಮದುವೆ ಕ್ಯಾನ್ಸಲ್ ಮಾಡಲು ಹೇಳಿದ್ದಾನೆ. ತಾಳ್ಮೆ ಕಳೆದುಕೊಳ್ಳದ ಗೆಳತಿ, ಫೋನ್ ನಲ್ಲಿ ಬೇಡ, ಭೇಟಿಯಾಗು ಎಂದು ಹೇಳಿದ್ದಾಳೆ.
ಬಾಯ್ ಫ್ರೆಂಡ್ ಬಂದಿದ್ದು, ಗೆಳತಿಯು ಮೊದಲು ಎಂದಿನಂತೆ ನಾವು ಲೈಂಗಿಕ ಕ್ರಿಯೆ ಮಾಡೋಣ. ಬಳಿಕ ಮದುವೆ ಕುರಿತು ಮಾತನಾಡೋಣ ಎಂದಿದ್ದಾಳೆ. ಇದರಿಂದ ಖುಷಿಯಾದ ಬಾಯ್ ಫ್ರೆಂಡ್ ಲೈಂಗಿಕ ಕ್ರಿಯೆಯಲ್ಲಿದ್ದಾಗ ಮರ್ಮಾಂಗ ಕತ್ತರಿಸಿದ್ದು, ನಂತರ ಟಾಯ್ಲೆಟ್ ಗೆ ಹಾಕಿ ಫ್ಲಶ್ ಮಾಡಿದ್ದಾಳೆ. ಈತ ಇತ್ತ ಚೀರಾಡುತ್ತಾ ಪೊಲೀಸರಿಗೆ ಫೋನ್ ಮಾಡಿದ್ದು, ನಂತರ ಅಸ್ವಸ್ಥಗೊಂಡಿದ್ದಾನೆ.
ಪೊಲೀಸರು ಸ್ಥಳಕ್ಕೆ ಬಂದಿದ್ದು, ಗೆಳತಿಯನ್ನು ಬಂಧನ ಮಾಡಿದ್ದು, ಬಳಿಕ ಪೊಲೀಸರಿಗೆ ಕಾರಣ ತಿಳಿಸಿದ್ದಾಳೆ. ನನಗೆ ಇದರಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾಳೆ. ಪ್ರೀತಿ ನಾಟಕ ಮಾಡಿ ದೈಹಿಕ ಸಂಪರ್ಕ ಓಕೆ ಅಂದ ಈತ ಮಹಾ ಪಾಪಿ ಎಂದು ಪೊಲೀಸರಿಗೆ ಹೇಳಿದ್ದಾಳೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA