ತುಮಕೂರು: ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಿಪಿಎಲ್ ಹೊಂದಿರುವಂತಹ ರೋಗಿಗಳಿಂದ ಯಾವುದೇ ರೀತಿಯ ಹಣ ಪಡೆಯದೆ ಉಚಿತ ಚಿಕಿತ್ಸೆ ನೀಡಬೇಕು ಎನ್ನುವ ಸ್ಪಷ್ಟ ಆದೇಶವಿದ್ದರೂ, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಯೊಬ್ಬರಿಂದ ಚಿಕಿತ್ಸೆಗಾಗಿ ಹಣ ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹಂದ್ರಾಳ್ ನಾಗಭೂಷಣ್ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ, ಹೊಳವನಹಳ್ಳಿ ಗ್ರಾಮದ ಓಬಳನರಸಯ್ಯ ಎಂಬುವರು ಸುಮಾರು ಇಪ್ಪತ್ತು ದಿನಗಳ ಹಿಂದೆ ಮೂಳೆ ಮುರಿತ ಚಿಕಿತ್ಸೆಗೆ ದಾಖಲಾಗುತ್ತಾರೆ. ಮೂಳೆ ಮುರಿತದ ಆಪರೇಷನ್ ಮಾಡಿಸಲು ಮೂಳೆ ವೈದ್ಯರಾದ ಡಾ.ಚಂದನ್ ಎಂಬುವರು ನಿಯಮಬಾಹಿರವಾಗಿ ಖಾಸಗಿ ವ್ಯಕ್ತಿಯೊಬ್ಬನಿಂದ ಸಾಮಗ್ರಿ ತರಿಸಿ ಬಡ ರೋಗಿಗೆ 10,500/ ಸಾವಿರ ಹಣ ನೀಡಲು ಒತ್ತಾಯಿಸಿದ್ದು, ಈಗಾಗಲೇ ಎರಡು ಸಾವಿರ ರೂಪಾಯಿಗಳನ್ನು ಫೋನ್ ಪೇ ಮೂಲಕ ಪಡೆದಿದ್ದಾರೆ. ಇದು ಆರೋಗ್ಯ ಇಲಾಖೆ,ಆರೋಗ್ಯ ಸಚಿವರ ಆದೇಶಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಈ ವಿಷಯದಲ್ಲಿ ಖಾಸಗಿ ವ್ಯಕ್ತಿಯಿಂದ ಉಪಕರಣ ಸಾಮಗ್ರಿ ತರಿಸಿಕೊಂಡಿರುವುದನ್ನು ತುಮಕೂರಿನ ಜಿಲ್ಲಾಸ್ಪತ್ರೆಯ DS ರವರೊಂದಿಗೆ ದೂರವಾಣಿಯೊಂದಿಗೆ ಮಾತನಾಡಿದಾಗ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ Inplent ನ ಟೆಂಡರ್ ಮುಗಿದಿದ್ದು ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಆದ ಕಾರಣ ಈ ಹಿಂದೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುತ್ತಿದ್ದ ವ್ಯಕ್ತಿಯಿಂದಲೇ ಈಗ ನಾವು ತರಿಸಿಕೊಳ್ಳುತ್ತಿದ್ದೇವೆ. ಈ ವ್ಯಕ್ತಿಯೇ ಎಲ್ಲಾ ಏಜೆನ್ಸಿಗಳಿಗಿಂತ ಕಡಿಮೆ ದರದಲ್ಲಿ ನೀಡುವುದು ಎಂದು ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ರವರು ಸಮರ್ಥನೆ ಮಾಡಿಕೊಂಡಿರುವುದು ಮೂಳೆ ವೈದ್ಯರ, ಜಿಲ್ಲಾ ಶಸ್ತ್ರ ಚಿಕಿತ್ಸಕರ ದುರ್ನಡತೆ, ಕರ್ತವ್ಯಲೋಪದ ಜೊತೆಗೆ ABARK ಯೋಜನೆಯನ್ನು ತುಮಕೂರು ಜಿಲ್ಲಾಸ್ಪತ್ರೆ ಸಂಪೂರ್ಣ ಉಲ್ಲಂಘನೆ ಮಾಡಿದಂತಾಗಿದೆ ಎಂದು ಹಂದ್ರಾಳ್ ನಾಗಭೂಷಣ್ ಟೀಕಿಸಿದ್ದಾರೆ.
ಪ್ರಸ್ತುತ ರೋಗಿಯು ಆಸ್ಪತ್ರೆಯಲ್ಲೇ ಒಳರೋಗಿಯಾಗಿದ್ದು, ರೋಗಿಯ ಕಡೆಯವರಿಗೆ ವಾರ್ಡ್ ನ ಸಿಬ್ಬಂದಿಗಳು ಉಳಿದ 8,500/ ಹಣ ಕಟ್ಟಿ ಡಿಸ್ಛಾರ್ಜ್ ಮಾಡಿಸಿಕೊಂಡು ಹೋಗಿ, ಈ ಬಗ್ಗೆ ಮೂಳೆ ವೈದ್ಯರಾದ ಚಂದನ್ ರವರ ಜೊತೆ ಮಾತನಾಡಿ ಎಂದು ಒತ್ತಾಯಿಸುತ್ತಿದ್ದಾರೆ. ರೋಗಿಯ ಕಡೆಯವರು ಕಡುಬಡವರಾಗಿದ್ದು, ಬಿಪಿಎಲ್ ವರ್ಗಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಉಳಿಕೆ ಹಣ ಕಟ್ಟಲು ಸಾಧ್ಯವಾಗದೇ ಜಿಲ್ಲಾಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಎಲ್ಲವುಗಳನ್ನು ಗಮನಿಸಿದರೆ ಸರ್ಕಾರಗಳು ಬಡ ಜನತೆಗೆ ಕೇವಲ ನೆಪ ಮಾತ್ರಕ್ಕೆ ಆರೋಗ್ಯ ಸೇವೆ ಸಂಪೂರ್ಣ ಉಚಿತ ಎಂದು ಹೇಳಿರುವಂತೆ ಕಾಣುತ್ತಿದೆ ಎಂದು ನಾಗಭೂಷಣ್ ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA