ಬೀದರ್: ಜಿಲ್ಲೆಯ ಔರಾದ ತಾಲೂಕಿನ ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿವರ್ಷದಂತೆ ಈ ವರ್ಷದಂತೆ ಈ ಬಾರಿಯೂ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೋರಕನಾಥ್, ಭಾರತ ರತ್ನ ಪುರಸ್ಕೃತ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಗಳಾದ ಡಾ. ಬಿಧನ ಚಂದ್ರ ರಾಯ್ ಗೌರವಾರ್ಥಕವಾಗಿ ರಾಷ್ಟ್ರೀಯ ವೈದ್ಯರ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನ ದೇಶಾದ್ಯಂತ ಆಚರಿಸಲಾಗಿದೆ. ಈ ದಿನವನ್ನು ವೈದ್ಯರು ಹಾಗೂ ಆರೋಗ್ಯ ವೃತ್ತಿಪರರಿಗೆ ಗೌರವ ಸೂಚಕವಾಗಿ ಆಚರಿಸಲಾಗುತ್ತಿದೆ. ಕೋವಿಡ್ 19 ಸಾಂಕ್ರಾಮಿಕ ರೋಗ ಬಂದಾಗ ಹಗಲು ರಾತ್ರಿ ಎನ್ನದೆ ತನ್ನ ಪ್ರಾಣ ಒತ್ತೆಯಿಟ್ಟು ಜಾತಿ ಧರ್ಮ ಎನ್ನದೆ ರೋಗಿಗಳ ಸೇವೆಗೆ ಸೇವೆ ಸಲ್ಲಿಸಿದ ವೈದ್ಯರು ನಮಗೆ ನೆನಪಿಗೆ ಬರುತ್ತಾರೆ ಎಂದರು
ವೈದ್ಯರೆಂದರೆ ದೇವರೆನ್ನುವ ಕಾಲವಿದು. ಕೋವಿಡ್ 19 ಬಂದಾಗ ದೇವರು ನೆನಪಿಗೆ ಬಂದರೋ ಇಲ್ಲವೋ ಗೊತ್ತಿಲ್ಲ ಆದರೆ ವೈದ್ಯರು ದಿನಾಲು ನೆನಪಿಗೆ ಬರುವಂತಹ ಕಾಲವಾಗಿತ್ತು ಎಂದರು.
ಆರೋಗ್ಯ ಕೇಂದ್ರದ ಎಲ್ಲಾ ವೈದ್ಯರಿಗೆ ಸನ್ಮಾನಿಸಿ ಕೇಕ್ ಕತ್ತರಿಸುವ ಮೂಲಕ ವೈದ್ಯರ ದಿನಾಚರಣೆ ಆಚರಿಸಲಾಯಿತು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


