ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಸತ್ಸಂಗದ ದುರಂತ ಇಡೀ ದೇಶವನ್ನನೇ ಬೆಚ್ಚಿಬೀಳಿಸಿದೆ. ಸಾಗರೋಪಾದಿಯಲ್ಲಿ ನೆರೆದಿದ್ದ ಜನರ ನಡುವೆ ಬರೀ ಕಾಲ್ತುಳಿತಕ್ಕೆ 100ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.
ಸತ್ಸಂಗ ಎಂಬುದು ಬೋಲೆ ಬಾಬ ಅವರು ನೀಡುವ ಧರ್ಮೋಪದೇಶ ಕಾರ್ಯಕ್ರಮ. ಆರಂಭದಲ್ಲಿ ಈ ಸತ್ಸಂಗದಲ್ಲಿ ಕೇವಲ 50 ಮಂದಿಗೆ ಮಾತ್ರ ಅನುಮತಿ ಕೋರಿದ್ದರು. ಆದರೆ, ಬರ ಬರುತ್ತಾ ಈ ಬಾಬನ ಸತ್ಸಂಗಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದರು.
ಬಾಬಾ ಮೂಲತಃ ಕಾಸ್ ಗಂಜ್ ಜಿಲ್ಲೆಯ ಪಟಿಯಾಲಿಯ ಬಹದ್ದೂರ್‌ನಗರದವರು, ಅವರ ಹೆಸರು ಸಕರ್ ವಿಶ್ವ ಹರಿ. ಇವರು ಬಾಬಾ ಆಗುವುದಕ್ಕೂ ಮೊದಲು ಪೊಲೀಸ್ ಗುಪ್ತಚರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ, ಅವರು ಕೆಲಸವನ್ನು ತೊರೆದು ಕಥೆಗಾರರಾಗುವ ಮೂಲಕ ಭಕ್ತರ ಸೇವೆ ಪ್ರಾರಂಭಿಸಿದರು.
ಕರೋನಾ ಸಮಯದಲ್ಲಿ, ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರಮವು ವಿವಾದಕ್ಕೆ ಒಳಗಾಗಿತ್ತು. ಆಗ ಅವರು ತಮ್ಮ ಸತ್ಸಂಗದಲ್ಲಿ ಕೇವಲ 50 ಮಂದಿಗೆ ಮಾತ್ರ ಅನುಮತಿ ಕೋರಿದ್ದರು. ಆದರೆ, ಬರ ಬರುತ್ತಾ ಅವರ ಸತ್ಸಂಗಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದರು. ಭೋಲೆ ಬಾಬಾ ಇಟಾಹ್, ಆಗ್ರಾ, ಮೈನ್‌ಪುರಿ, ಷಹಜಹಾನ್‌ಪುರ, ಹತ್ರಾಸ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ಹೆಸರು ವಾಸಿಯಾಗಿದ್ದಾರೆ. ಇದಲ್ಲದೇ, ಮಧ್ಯಪ್ರದೇಶದ ಪಶ್ಚಿಮ ಯುಪಿ, ರಾಜಸ್ಥಾನ, ಹರಿಯಾಣಕ್ಕೆ ಹೊಂದಿಕೊಂಡಿರುವ ಹಲವು ಜಿಲ್ಲೆಗಳಲ್ಲಿ ಅವರು ಪ್ರವಚನ ನೀಡುತ್ತಾರೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದೆ. ಯುಪಿ ಸರ್ಕಾರವು ಎಲ್ಲಾ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಲ್ಲಿ ತೊಡಗಿದೆ. ಇದರಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರಿಗೆ ನನ್ನ ಸಹಾನುಭೂತಿ ಇದೆ. ಇನ್ನು ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮೃತರ ಕುಟಂಬಗಳಿಗೆ ತಲಾ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA