18ನೇ ಲೋಕಸಭೆಯ ಮೊದಲ ಅಧಿವೇಶನ ಭಾರೀ ಕಾವೇರಿದೆ. ಹಲವು ಮಹತ್ವದ ಚರ್ಚೆಗಳು ಚರ್ಚಿತವಾಗುವ ಜೊತೆಗೆ ಕೋಲಾಹಲ, ಗದ್ದಲಗಳಿಗೂ ಸಾಕ್ಷಿಯಾಗಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ರೊಚ್ಚಿಗೆದ್ದಿದ್ದು, ಪ್ರತಿಭಟನೆ ನಡೆಸುತ್ತಿವೆ. ಹೀಗೆ ವಿಪಕ್ಷಗಳು ಸಂಸತ್ತಿನೊಳಗೆ ಪ್ರತಿಭಟಿಸುವಾಗ ಅಪರೂಪದ ಪ್ರಸಂಗವೊಂದು ನಡೆದಿದೆ.
ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುವಾಗ ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ನರೇಂದ್ರ ಮೋದಿಯವರು ತಮ್ಮ ಮುಂದೆಯೇ ನಿಂತು ತನ್ನ ವಿರುದ್ಧ ಕಿರುಚಿ ಕಿರುಚಿ ಪ್ರತಿಭಟಿಸುತ್ತಿದ್ದ ಸಂಸದರಿಗೆ ಕುಡಿಯಲು ನೀರು ನೀಡಿದಂತ ಘಟನೆ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಸದನದ ಬಾವಿಗಿಳಿದು ಕಿರುಚಿ ಬೊಬ್ಬೆ ಹೊಡೆದು ತಮ್ಮ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷಗಳ ನಾಯಕರಿಗೆ ಮೋದಿ ಕುಡಿಯಲು ನೀರು ನೀಡಿದರು. ಒಬ್ಬರು ನೀರು ನಿರಾಕರಿಸಿದರೆ, ಮತ್ತೊಬ್ಬರು ನೀರು ಕುಡಿದು ದಾಹ ತೀರಿಸಿಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA