ರಸ್ತೆ ಸುರಕ್ಷತೆಯ ಫಲಕಗಳನ್ನು ಆಯ್ದ ತಿರುವುಗಳಲ್ಲಿ, ಹೈವೆಗಳಲ್ಲಿ, ಅಥವಾ ಹಲವು ಆಕ್ಸಿಡೆಂಟ್ ಆಗಿರುವ ಪ್ರದೇಶಗಳಲ್ಲಿ ಹಾಕುವುದನ್ನು ಕಾಣುತ್ತೇವೆ. ಅಪಘಾತ ವಲಯ, ಅವಸರವೇ ಅಪಘಾತಕ್ಕೆ, ನಿಧಾನವಾಗಿ ಚಲಿಸಿ, ಮುಂದೆ ತಿರುವು ಇದೆ ಇತ್ಯಾದಿ ಸೂಚನಾ ಫಲಕ ಅಳವಡಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಸ್ವತ: ‘ಅರ್ಜೆಂಟ್ ಆಗಿ, ಒಂದು ಆಕ್ಸಿಡೆಂಟ್ ಮಾಡಿ ‘ ಎನ್ನುವ ನಾಮಫಲಕವನ್ನು ಹಾಕಲಾಗಿದೆ.
ಈ ನಾಮಫಲಕದಲ್ಲಿ “ಅವಸರವೇ ಅಪಘಾತಕ್ಕೆ ಕಾರಣ” ಮತ್ತು “Urgent Make An Accident” ಎಂದು ಬರೆಯಲಾಗಿದೆ. ಅರ್ಜೆಂಟ್ ಮೇಕ್ ಎನ್ ಆಕ್ಸಿಡೆಂಟ್ ಅಂದರೆ ಇಂಗ್ಲಿಷ್ ಮತ್ತು. ಕನ್ನಡ ಬಲ್ಲವರಿಗೆ ನಗು ಬರುತ್ತದೆ. ಅದರ ಅರ್ಥ ʼತುರ್ತಾಗಿ ಒಂದು ಅಪಘಾತ ಮಾಡಿʼ ಎಂದಾಗುತ್ತದೆ ! ಅರ್ಜೆಂಟ್ ಅಪಘಾತಕ್ಕೆ ನಾಂದಿಯಾಗುತ್ತದೆ ಅನ್ನುವ ಬದಲು ಅರ್ಜೆಂಟಾಗಿ ಒಂದು ಆಕ್ಸಿಡೆಂಟ್ ಮಾಡಿ ಎನ್ನುವಂತೆ ಈ ಸೂಚನಾ ಫಲಕ ಬಿದ್ದಿದೆ. ಬಹುಶಃ ಕನ್ನಡದಿಂದ ಇಂಗ್ಲಿಷ್ ಗೆ ತಪ್ಪಾಗಿ ಅನುವಾದ ಮಾಡಿರುವುದರಿಂದ ಈ ಅವಾಂತರ ಉಂಟಾಗಿದೆ ಎನ್ನಲಾಗಿದೆ.
ಮಡಿಕೇರಿಯ ಸಂಪಾಜೆ ಬಳಿ ಮುಖ್ಯರಸ್ತೆಯಲ್ಲಿ. ಈ ನಾಮಫಲಕ ಕಂಡು ಬಂದಿತ್ತು ಎನ್ನಲಾಗಿದೆ. ಇದೀಗ ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


