ಬೀದರ್: ನೂತನ ಜಿಲ್ಲಾಧಿಕಾರಿಯಾಗಿ ಶಿಲ್ಪಾ ಶಮಾ೯ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದಿನ ಡಿಸಿ ಗೋವಿಂದ ರೆಡ್ಡಿ ಅವರನ್ನು ಬೀದರ ಜಿಲ್ಲೆಯಿಂದ ಗದಗ ಜಿಲ್ಲಾಧಿಕಾರಿ ಯನ್ನಾಗಿ ವಗಾ೯ವಣೆಗೊಳಿಸಿದೆ. ಬೀದರ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿರುವ ಶಿಲ್ಪಾ ಶರ್ಮಾ ಅವರು ಕನಾ೯ಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್ ವ್ಯವಸ್ಥಾಪಕ ನಿದೇ೯ಶಕಿಯಾಗಿದ್ದರು.
ಎರಡು ದಿನಗಳ ಹಿಂದೆ ಬೀದರ ಎಸ್ಪಿ ಚೆನ್ನಬಸವಣ್ಣ ಎಸ್.ಎಲ್. ಅವರನ್ನು ವರ್ಗಾವಣೆಗೊಳಿಸಿ ಅವರ ಜಾಗಕ್ಕೆ ಪ್ರದೀಪ್ ಗುಂಟಿ ಅವರನ್ನು ನೇಮಕ ಮಾಡಲಾಗಿತ್ತು.
ಇದೀಗ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಎತ್ತಂಗಡಿ ಮಾಡಿದ್ದು ಅವರ ಜಾಗಕ್ಕೆ ಶಿಲ್ಪಾ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ವಾರದೊಳಗೆ ಡಿಸಿ. ಎಸ್ಪಿ ಇಬ್ಬರನ್ನು ವರ್ಗಾವಣೆಗೊಳಿಸಿ ಹೊಸಬರನ್ನು ನೇಮಕ ಮಾಡಿದಂತಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


