ಸ್ಪ್ರೈಟ್( Sprite) ಕೂಲ್ ಡ್ರಿಂಕ್ ನಲ್ಲಿ ಜೇಡ ರೂಪದ ಹುಳ ಪತ್ತೆಯಾಗಿರುವ ಘಟನೆ ನಡೆದಿದ್ದು, ಹುಳವನ್ನು ಕಂಡು ಕೂಲ್ ಡ್ರಿಂಕ್ಸ್ ಪ್ರಿಯರು ಬೆಚ್ಚಿಬಿದ್ದಿದ್ದಾರೆ.
ತುಮಕೂರು ನಗರದ ಭಾರತಿ ಟೀ ಶಾಪ್ ನಲ್ಲಿ ಈ ಘಟನೆ. ಕೋಕಾ ಕೋಲಾ ಕಂಪನಿಯ ಪ್ರಾಡಕ್ಟ್ ಸ್ಪ್ರೈಟ್ ಕೂಲ್ ಡ್ರಿಂಕ್ ನಲ್ಲಿ ಹುಳ ಪತ್ತೆಯಾಗಿದೆ.
ಗ್ರಾಹಕ ರಕ್ಷಿತ್ ಖರೀದಿ ಸಿದ ಸ್ಪ್ರೈಟ್ ನಲ್ಲಿ ಹುಳ ಪತ್ತೆಯಾಗಿದೆ. ಹುಳ ಪತ್ತೆಯಾದ ಹಿನ್ನೆಲೆ ರಕ್ಷಿತ್ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳು ಟೀ ಶಾಪ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸ್ಪ್ರೈಟ್ ಬಾಟಲ್ ಗಳನ್ನ ವಶಕ್ಕೆ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಅಂಗಡಿ ಮಾಲೀಕರು, ವಿತರಕ ಹಾಗೂ ಕಂಪನಿ ವಿರುದ್ದ ದೂರು ದಾಖಲಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA